- Advertisement -
Recipe: ಬೇಕಾಗುವ ಸಾಮಗ್ರಿ: ಕಾಲು ಕಪ್ ಕರಿಬೇವು ಪುಡಿ, ಕರಿಬೇವನ್ನು ಪೇಸ್ಟ್ ಮಡಿ ಬಳಸಿದರೂ ನಡೆಯುತ್ತದೆ. ಅನ್ನ, 2 ಹಸಿಮೆಣಸು, 1 ಸ್ಪೂನ್ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆಬೇಳೆ, ಸ್ವಲ್ಪ ಶೇಂಗಾ, 1 ಈರುಳ್ಳಿ, ಅರಿಶಿನ, ಗರಂ ಮಸಾಲೆ, ಉಪ್ಪು, ಎಣ್ಣೆ.
ಮಾಡುವ ವಿಧಾನ: ಪ್ಯಾನ್‌ಗೆ ಎಣ್ಣೆ ಅಥವಾ ತುಪ್ಪ ಹಾಕಿ, ಸಾಸಿವೆ, ಜೀರಿಗೆ, ಮೆಣಸು, ಉದ್ದಿನಬೇಳೆ, ಕಡಲೆಬೇಳೆ, ಶೇಂಗಾ ಹಾಕಿ ಹುರಿಯಿರಿ. ಬಳಿಕ ಈರುಳ್ಳಿ ಹಾಕಿ ಹುರಿಯಿರಿ. ನಂತರ ಕರಿಬೇವಿನ ಪೇಸ್ಟ್ ಹಾಕಿ, ಹಸಿವಾಸನೆ ಹೋಗುವವರೆಗೂ ಬಾಡಿಸಿ.
ಬಳಿಕ ಅರಿಶಿನ, ಗರಂ ಮಸಾಲೆ, ಉಪ್ಪು ಹಾಕಿ ಮಿಕ್ಸ್ ಮಾಡಿ. ಕ“ನೆಗೆ ಅನ್ನ ಹಾಕಿ ಮಿಕ್ಸ್ ಮಾಡಿದ್ರೆ ಕರಿಬೇವಿನ ರೈಸ್ ರೆಡಿ. ಇದು ಆರೋಗ್ಯಕ್ಕೆ ಉತ್ತಮವಲ್ಲದೇ, ರುಚಿಕರವೂ ಆಗಿದೆ.
- Advertisement -