Friday, December 5, 2025

Latest Posts

Recipe: ಈರುಳ್ಳಿ- ಬೆಳ್ಳುಳ್ಳಿ ಬಳಸದೇ ಮಾಡಬಹುದು ಈ ಗ್ರೇವಿ

- Advertisement -

Recipe: ಬೇಕಾಗುವ ಸಾಮಗ್ರಿ: 1 ಕಪ್ ರಾಜ್ಮಾ, ಕೊತ್ತೊಂಬರಿ ಸೊಪ್ಪು, 2 ಟೋಮೆಟೋ ಪ್ಯೂರಿ, 4 ಸ್ಪೂನ್ ಎಣ್ಣೆ, 1 ಸ್ಪೂನ್ ಜೀರಿಗೆ, 2 ಪಲಾವ್ ಎಲೆ, ಏಲಕ್ಕಿ, ಹಸಿಮೆಣಸು, ಶುಂಠಿ, 1 ಸ್ಪೂನ್ ಖಾರದ ಪುಡಿ, ಧನಿಯಾ ಪುಡಿ, ಚೂರು ಹಿಂಗ್, ಅರಿಶಿನ, 1 ಸ್ಪೂನ್ ಗೋಡಂಬಿ ಪೇಸ್ಟ್, 1 ಸ್ಪೂನ್ ಕಸೂರಿ ಮೇಥಿ, ಗರಂ ಮಸಾಲೆ, ಉಪ್ಪು.

ಮಾಡುವ ವಿಧಾನ: ರಾಜ್ಮಾವನ್ನು 5 ಗಂಟೆಗಳ ಕಾಲ ನೆನೆಸಿ, ಕುಕ್ಕರ್‌ಗೆ ಹಾಕಿ 2 ವಿಶಲ್ ಆಗುವವರೆಗೂ ಬೇಯಿಸಿ. ಈಗ 1 ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ, ಜೀರಿಗೆ, ಪಲಾವ್ ಎಲೆ, ಏಲಕ್ಕಿ, ಹಸಿಮೆಣಸು, ಶುಂಠಿ, 1 ಸ್ಪೂನ್ ಖಾರದ ಪುಡಿ, ಧನಿಯಾ ಪುಡಿ, ಚೂರು ಹಿಂಗ್, ಅರಿಶಿನ ಹಾಕಿ ಬಾಡಿಸಿ.

ಬಳಿಕ 1 ಸ್ಪೂನ್ ಗೋಡಂಬಿ ಪೇಸ್ಟ್, ಟೋಮೆಟೋ ಪೇಸ್ಟ್ ಹಾಕಿ ಮಿಕ್ಸ್ ಮಾಡಿ. ಬಳಿಕ ಉಪ್ಪು ಹಾಕಿ, ಎಣ್ಣೆ ಬಿಡುವವರೆಗೂ ಬಾಡಿಸಿ. ಬಳಿಕ ಬೇಯಿಸಿದ ರಾಜ್ಮಾ ಸೇರಿಸಿ, ಕಸೂರಿ ಮೇಥಿ, ಉಪ್ಪು, ಗರಂ ಮಸಾಲೆ, ಕೊತ್ತೊಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ, ಸಣ್ಣ ಕುದಿ ಬರಿಸಿದರೆ, ಗ್ರೇವಿ ರೆಡಿ.

- Advertisement -

Latest Posts

Don't Miss