Recipe: ಬೇಕಾಗುವ ಸಾಮಗ್ರಿ: 2ರಿಂದ 3 ನುಗ್ಗೇಕಾಯಿ, 3 ಆಲೂಗಡ್ಡೆ, 1 ಈರುಳ್ಳಿ, 1 ಟೋಮೆಟೋ, 3 ಸ್ಪೂನ್ ಎಣ್ಣೆ, 1 ಸ್ಪೂನ್ ಜೀರಿಗೆ, ಸಾಸಿವೆ, ಕರಿಬೇವು, ಮೆಣಸು, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಖಾರದ ಪುಡಿ, ಗರಂ ಮಸಾಲೆ, ಧನಿಯಾ ಪುಡಿ, ಸ್ವಲ್ಪ ಕೊತ್ತೊಂಬರಿ ಸೊಪ್ಪು, ಉಪ್ಪು.
ಮಾಡುವ ವಿಧಾನ: ನುಗ್ಗೆ ಮತ್ತು ಆಲೂಗಡ್ಡೆಯನ್ನು ಉಪ್ಪು ಮತ್ತು ಅರಿಶಿನ ಹಾಕಿ, ಸಪರೇಟ್ ಆಗಿ ಬೇಯಿಸಿ. ಬಳಿಕ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ತುಪ್ಪ , ಸಾಸಿವೆ, ಜೀರಿಗೆ, ಕರಿಬೇವು, ಮೆಣಸು, ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ.
ನಂತರ ಈರುಳ್ಳಿ ಹಾಕಿ ಮತ್ತೆ ಹುರಿಯಿರಿ. ಇದಕ್ಕೆ ಅರಿಶಿನ, ಖಾರದ ಪುಡಿ, ಗರಂ ಮಸಾಲೆ, ಧನಿಯಾ ಪುಡಿ, ಉಪ್ಪು ಟೋಮೆಟೋ ಹಾಕಿ ಮಿಕ್ಸ್ ಮಾಡಿ. ಹುರಿಯಿರಿ. ನಂತರ ಆಲೂಗಡ್ಡೆ ಹಾಕಿ. ಮುಚ್ಚಳ ಮುಚ್ಚಿ 2 ನಿಮಿಷ ಮಂದ ಉರಿಯಲ್ಲಿ ಬೇಯಿಸಿ.
ಬಳಿಕ ಬೇಯಿಸಿದ ನುಗ್ಗೆಕಾಯಿ ಹಾಕಿ ಮತ್ತೆ ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಿ. ನಂತರ ಕೊತ್ತೊಂಬರಿ ಸೊಪ್ಪು ಮೇಲಿನಿಂದ ಉದುರಿಸಿದರೆ, ಪಲ್ಯ ರೆಡಿ.




