Recipe: ಬೇಕಾಗುವ ಸಾಮಗ್ರಿ: 5 ಬೇಯಿಸಿದ ಆಲೂಗಡ್ಡೆ, 3 ಟೊಮೆಟೋ, ಒಂದು ಸ್ಪೂನ್ ಜೀರಿಗೆ, ಕೊತ್ತೊಂಬರಿ ಕಾಳು, ಸೋಂಪು, ಕೊಂಚ ಕಾಳು ಮೆಣಸು, 1 ಪಲಾವ್ ಎಲೆ, 2 ಏಲಕ್ಕಿ, ಸ್ವಲ್ಪ ಲವಂಗ, ಕೊತ್ತೊಂಬರಿ ಸೊಪ್ಪು, ಪುದೀನಾ, ಚಿಟಿಕೆ ಹಿಂಗು, ಅರಿಶಿನ, ಖಾರದ ಪುಡಿ, ಅರ್ಧ ಸ್ಪೂನ್ ಗರಂ ಮಸಾಲೆ, ಕಸೂರಿ ಮೇಥಿ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ಇದಕ್ಕೆ ಬೇಕಾದ ಒಣ ಮಸಾಲೆ ತಯಾರಿಸಿಕೊಳ್ಳಿ. ಜೀರಿಗೆ, ಕೊತ್ತೊಂಬರಿ ಕಾಳು, ಸೋಂಪು, ಕಾಳು ಮೆಣಸು, ಶುಂಠಿ, 2 ಹಸಿಮೆಣಸನ್ನು ಕುಚ್ಚಿ, ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಇನ್ನೊಂದು ಮಸಾಲೆಗಾಗಿ ಕೊಂಚ ಪುದೀನಾ, ಕೊತ್ತೊಂಬರಿ ಸೊಪ್ಪು, ಕೊಂಚ ಹಿಂಗು ಹಾಕಿ, ತರಿ ತರಿಯಾದ ಪೇಸ್ಟ್ ತಯಾರಿಸಿಕೊಳ್ಳಿ. ಈಗ ಎರಡೂ ಮಸಾಲೆ ರೆಡಿ.
ಈಗ ಪ್ಯಾನ್ ಬಿಸಿ ಮಾಡಿ, 4 ಸ್ಪೂನ್ ತುಪ್ಪ ಅಥವಾ ಎಣ್ಣೆ ಹಾಕಿ, ಪಲಾವ್ ಎಲೆ, ಏಲಕ್ಕಿ, ಲವಂಗ ಹಾಕಿ ಹುರಿಯಿರಿ. ಬಳಿಕ ರೆಡಿ ಮಾಡಿಟ್ಟುಕೊಂಡ ಒಣ ಮಸಾಲೆಯಲ್ಲಿ 1 ಸ್ಪೂನ್ ಮಸಾಲೆ ಇದಕ್ಕೆ ಸೇರಿಸಿ, ಮತ್ತೆ ಹುರಿಯಿರಿ. ಬಳಿಕ ಹಸಿರು ಮಸಾಲೆ ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿಯಬೇಕು. ಬಳಿಕ ಟೊಮೆಟೋ ಹಾಕಿ ಹುರಿದು, ಕೊಂಚ ನೀರು ಹಾಕಿ, ಮುಚ್ಚಳ ಮುಚ್ಚಿ 3 ನಿಮಿಷ ಮಂದ ಉರಿಯಲ್ಲಿ ಬೇಯಿಸಿ.
ಬಳಿಕ ಇದ್ಕಕೆ ಉಪ್ಪು, ಅರಿಶಿನ, ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ. ಈ ಮಸಾಲೆಗೆ ನೀರು ಹಾಕಿದ್ದು, ಕಡಿಮೆಯಾದರೆ, ಮತ್ತಷ್ಟು ನೀರು ಹಾಕಿ, ಬೇಯಿಸಬೇಕು. ಬಳಿಕ ಗರಂ ಮಸಾಲೆ, ಕಸೂರಿ ಮೇಥಿ, ಬೇಯಿಸಿ, ಮ್ಯಾಶ್ ಮಾಡಿದ ಆಲೂಗಡ್ಡೆ ಹಾಕಿ, ಗ್ರೇವಿಯ ರೀತಿ ಆಗುವವರೆಗೂ ಬೇಯಿಸಬೇಕು. ಕೊನೆಗೆ ಕೊಂಚ ಆಚ್ಜೂರ್ ಪುಡಿ, ಅಥವಾ ಚಾಟ್ ಮಸಾಲೆ, 2 ಕತ್ತರಿಸಿದ ಹಸಿಮೆಣಸು, ಶುಂಠಿ, ತುಪ್ಪ ಹಾಕಿದ್ರೆ ಟೊಮೆಟೋ ಚಾಟ್ ರೆಡಿ.