Movie News: ತೆಲುಗು ನಟ ಅಕ್ಕಿನೇನಿ ನಾಗಚೈತನ್ಯಾ ಸಮಂತಾ ಜೊತೆ ಡಿವೋರ್ಸ್ ಪಡೆದ ಬಳಿಕ, ನಟಿ ಶೋಭಿತಾ ಧೂಲಿಪಾಲ್ ಜೊತೆ, ಇತ್ತೀಚೆಗೆ ವಿವಾಹವಾಗಿದ್ದಾರೆ. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಈ ವಿವಾಹ ನೆರವೇರಿದ್ದು, ಹಲವು ಸೆಲೆಬ್ರಿಟಿಗಳು ಈ ಘಟನೆಗೆ ಸಾಕ್ಷಿಯಾಗಿದ್ದರು.
ಆದರೆ ಇದರಿಂದ ಸಮಂತಾ ಫ್ಯಾನ್ಸ್ ಮಾತ್ರ ತುಂಬಾ ಬೇಸರಪಟ್ಟಿದ್ದಾರೆ. ಪುರುಷರು ಅದೆಷ್ಟು ಬೇಗ ಮೂವ್ ಆನ್ ಆಗುತ್ತಾರೆ ಎಂದು ಪೋಸ್ಟ್ ಹಾಕುತ್ತಿದ್ದಾರೆ. ಅಲ್ಲದೇ, ಚಿನ್ನ ಹುಡುಕುವ ನೆಪದಲ್ಲಿ, ನಾಗಚೈತನ್ಯ ವಜ್ರವನ್ನು ಕಳೆದುಕೊಂಡಿದ್ದಾನೆ ಎಂದಿದ್ದಾರೆ.
ಈ ಎಲ್ಲದರ ನಡುವೆ ಬಾಲಿವುಡ್ ಸ್ಟಾರ್ ವರುಣ್ ಧವನ್, ಸಮಂತಾರ ಸಂದರ್ಶನ ಮಾಡಿದ್ದು, ಈ ಸಂದರ್ಶನದಲ್ಲಿ ಸಮಂತಾಗೆ, ನೀವು ಜೀವನದಲ್ಲಿ ಸುಮ್ಮನೆ ವೇಸ್ಟ್ ಮಾಡಿದ ದುಡ್ಡೆಷ್ಟು..? ಅದನ್ನು ಯಾಕೆ ಖರ್ಚು ಮಾಡಿದ್ದು..? ಯಾರಿಗೆ ಖರ್ಚು ಮಾಡಿದ್ದು ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಸಮಂತಾ, ನನ್ನ ಎಕ್ಸ್‌ಗೆ ಕೊಟ್ಟ ಕಾಸ್ಟ್ಲಿ ಗಿಫ್ಟ್‌ಗಾಗಿ ನಾನು ಹಣ ಖರ್ಚು ಮಾಡಿದ್ದೆ, ಅದು ವೇಸ್ಟ್ ಅಂತಾ ನನಗನ್ನಿಸುತ್ತಿದೆ ಎಂದಿದ್ದಾರೆ. ಆಗ ವರುಣ್ ಏನು ಗಿಫ್ಟ್ ಕೊಟ್ಟಿದ್ದಿರಿ..? ಎಷ್ಟು ಖರ್ಚು ಮಾಡಿದ್ರಿ ಎಂದು ಕೇಳಿದ್ದಾರೆ. ಆದರೆ ಗುಟ್ಟು ಬಿಟ್ಟುಕೊಡದ ಸಮಂತಾ, ಸ್ವಲ್ಪ ಖರ್ಚು ಮಾಡಿದ್ದೆ, ಸಣ್ಣ ಗಿಫ್ಟ್ ಕೊಟ್ಟಿದ್ದೆ, ಈಗ ಅದರ ಬಗ್ಗೆ ಮಾತು ಬೇಡ ಎಂದಿದ್ದಾರೆ.
ಇನ್ನು ಈ ವೀಡಿಯೋ ವೈರಲ್ ಆಗುತ್ತಿದ್ದಂತೆ, ಸಮಂತಾ ನಾಗಚೈತನ್ಯಗೆ ಏನು ಕೊಟ್ಟಿರಬಹುದು ಎಂದು ಅಂದಾಜಿಸಲು ಶುರು ಮಾಡಿದ್ದಾರೆ. ಕೆಲವರು ಮನೆ ಎಂದು ತಿಳಿದಿದ್ದಾರೆ, ಕೆಲವರು ಬೈಕ್, ಬ್ರೆಸ್‌ಲೆಟ್ , ಕಾರ್, ಈ ರೀತಿ ಗಿಫ್ಟ್ ಮಾಡಿರಬಹುದು ಎಂದು ಅಂದಾಜಿಸುತ್ತಿದ್ದಾರೆ. ಒಟ್ಟಾರೆಯಾಗಿ ಸಮಂತಾ ಮಾತ್ರ, ಇದುವರೆಗೂ ತಾವು ಚೈತನ್ಯಗೆ ಏನು ಗಿಫ್ಟ್ ಕೊಟ್ಟಿದ್ದರು ಎಂದು ಗುಟ್ಟು ಮಾತ್ರ ಬಿಟ್ಟುಕೊಟ್ಟಿಲ್ಲ.