Wednesday, August 20, 2025

Latest Posts

Recipe: ಸೋಯಾ ಚಂಕ್ಸ್ ಪಲಾವ್ ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: ಅಕ್ಕಿ, 2 ಕಪ್ ಸೋಯಾ ಚಂಕ್ಸ್, ಕ್ಯಾರೇಟ್, ಈರುಳ್ಳಿ, ಬೀನ್ಸ್, ಕ್ಯಾಪ್ಸಿಕಂ, ಬಟಾಣಿ, 1 ಸ್ಪೂನ್ ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಅರಿಶಿನ, 1 ಸ್ಪೂನ್ ಗರಂ ಮಸಾಲೆ, ಖಾರದ ಪುಡಿ, ಧನಿಯಾ ಪುಡಿ, ಚಾಟ್ ಮಸಾಲೆ, 1 ಸ್ಪೂನ್ ಕಸೂರಿ ಮೇಥಿ, ತುಪ್ಪ, ಪಲಾವ್ ಎಲೆ, ಕಾಳುಮೆಣಸು, ಚಕ್ಕೆ, ಲವಂಗ, ಏಲಕ್ಕಿ, ಉಪ್ಪು.

ಮಾಡುವ ವಿಧಾನ: ನೀರು ಕುದಿ ಬರಿಸಿ, ಅದಕ್ಕೆ ಸೋಯಾ ಚಂಕ್ಸ್ ಹಾಕಿ, ಗ್ಯಾಸ್ ಆಪ್ ಮಾಡಿ. ಬಳಿಕ ಬಿಸಿ ನೀರಿನಿಂದ ಐಸ್ ನೀರಿಗೆ ಈ ಸೋಯಾ ಚಂಕ್ಸ್ ಹಾಕಿ, ನೀರನ್ನು ಹಿಂಡಿ.

ಈಗ ಕುಕ್ಕರ್ ಬಿಸಿ ಮಾಡಿ, ಅದಕ್ಕೆ ತುಪ್ಪ, ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ಕಾಳುಮೆಣಸು, ಜೀರಿಗೆ ತರಿ ತರಿಯಾಗಿ ಪುಡಿ ಮಾಡಿ ಹಾಕಿ,. ಹುರಿಯಿರಿ. ಬಳಿಕ ಈರುಳ್ಳಿ ಹಾಕಿ ಹುರಿಯಿರಿ. ನಂತರ ಕ್ಯಾಪ್ಸಿಕಂ, ಕ್ಯಾರೇಟ್, ಬಿನ್ಸ್, ಬಟಾಣಿ, ಹಾಕಿ ಹುರಿಯಿರಿ.

ನಂತರ ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಗರಂ ಮಸಾಲೆ, ಖಾರದ ಪುಡಿ, ಧನಿಯಾ ಪುಡಿ, ಚಾಟ್ ಮಸಾಲೆ, ಕಸೂರಿ ಮೇಥಿ, ಹಾಕಿ ಮಿಕ್ಸ್ ಮಾಡಿ.

ಬಳಿಕ ಸೋಯಾ ಚಂಕ್ಸ್, ಕ್ಲೀನ್ ಮಾಡಿದ ಅಕ್ಕಿ, ಉಪ್ಪು, ನೀರು ಹಾಕಿ ಮಿಕ್ಸ್ ಮಾಡಿ, 3 ವಿಶಲ್ ಕೂಗಿಸಿದರೆ, ಸೋಯಾ ಪಲಾವ್ ರೆಡಿ.

- Advertisement -

Latest Posts

Don't Miss