Recipe: ಬೇಕಾಗುವ ಸಾಮಗ್ರಿ: ಬೀಟ್ರೂಟ್, ಆ್ಯಪಲ್, ಕ್ಯಾರೇಟ್, ದಾಳಿಂಬೆ, ಎಲ್ಲ ಹಣ್ಣು-ತರಕಾರಿ ಅರ್ಧರ್ಧ ಇರಲಿ. ಸಣ್ಣ ತುಂಡು ಶುಂಠಿ.
ಮಾಡುವ ವಿಧಾನ: ನೀವು ಜ್ಯೂಸರ್‌ಗೆ ಇವೆಲ್ಲವನ್ನೂ ಹಾಕಿ ಜ್ಯೂಸ್ ತಯಾರಿಸಿ. ಬೇಕಾದಲ್ಲಿ ಮಾತ್ರ ನೀರು ಬಳಸಿ. ಐಸ್ಕ್ಯೂಬ್ ಬಳಸದಿದ್ದರೂ ಉತ್ತಮ. ನೀವು ವಾರದಲ್ಲಿ 2-3 ದಿನ ಈ ಜ್ಯೂಸನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ, ನಿಮ್ಮ ಸ್ಕಿನ್ ಬಹುಬೇಗ ಗ್ಲೋ ಆಗಲು ಶುರುವಾಗುತ್ತದೆ. ಆದರೆ ನೀವು ಈ ಜ್ಯೂಸ್‌ನ್ನು ಗಾಳಿಸಿ ಕುಡಿಯಬಾರದು. ಫ್ರೆಶ್ ಆಗಿ ಮಾಡಿದ ತಕ್ಷಣ, ಹಾಗೇ ಗ್ಲಾಸಿಗೆ ಹಾಕಿ ಕುಡಿಯಿರಿ.




