Recipe: ಬೇಕಾಗುವ ಸಾಮಗ್ರಿ: 2 ಸಿಹಿಗೆಣಸು, 1 ಸ್ಪೂನ್ ನಿಂಬೆ ರಸ, 2 ಸ್ಪೂನ್ ಜೇನುತುಪ್ಪ, 3 ಸ್ಪೂನ್ ಆಲಿವ್ ಎಣ್ಣೆ, 1 ಸ್ಪೂನ್ ಚಿಲ್ಲಿ ಫ್ಲೇಕ್ಸ್, 2 ಸ್ಪೂನ್ ಬಿಳಿ ಎಳ್ಳು, 1 ಸ್ಪೂನ್ ಎಣ್ಣೆ ಅಥವಾ ತುಪ್ಪ, ಸ್ವಲ್ಪ ದಾಳಿಂಬೆ, ಸ್ವಲ್ಪ ಪನೀರ್ ತುರಿ, ಉಪ್ಪು.
ಮಾಡುವ ವಿಧಾನ: ಸಿಹಿಗೆಣಸನ್ನು ಕುಕ್ಕರ್‌ಗೆ ಹಾಕಿ ಮಂದ ಉರಿಯಲ್ಲಿ 3 ವಿಶಲ್ ಬರುವವರೆಗೂ ಬೇಯಿಸಿ. ಇದು ತಣಿದ ಬಳಿಕ ಸಿಪ್ಪೆ ತೆಗೆದು, ಗೋಲಾಕಾರದಲ್ಲಿ ಕತ್ತರಿಸಿ, ಇದು ಬಿಲ್ಲೆಯ ರೀತಿ ಶೇಪ್ ಇರಲಿ.
1 ಮಿಕ್ಸಿಂಗ್ ಬೌಲ್‌ಗೆ ನಿಂಬೆ ರಸ, ಜೇನುತುಪ್ಪ, ಆಲಿವ್ ಎಣ್ಣೆ, ಚಿಲ್ಲಿ ಫ್ಲೇಕ್ಸ್, ಬಿಳಿ ಎಳ್ಳು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಪಕ್ಕಕ್ಕಿರಿಸಿ. ಈಗ ದೋಸೆ ಪ್ಯಾನ್ ಬಿಸಿ ಮಾಡಿ, ಅದರ ಮೇಲೆ ಎಣ್ಣೆ ಅಥವಾ ತುಪ್ಪವನ್ನು ಹರಡಿ, ಅದರ ಮೇಲೆ ಬೇಯಿಸಿದ ಸಿಹಿಗೆಣಸನ್ನು ಇಡಿ. ಸ್ವಲ್ಪ ರೋಸ್ಟ್ ಮಾಡಿ, ಗ್ಯಾಸ್ ಆಫ್ ಮಾಡಿ.
ಬಳಿಕ ಪ್ಯಾನ್ ಮೇಲೆ ರೆಡಿ ಮಾಡಿದ ಕೋಟಿಂಗ್ ಹಾಕಿ, ಮಿಕ್ಸ್ ಮಾಡಿ. ಬಳಿಕ 1 ಬೌಲ್‌ಗೆ ಇದನ್ನು ಹಾಕಿ, ಉಪ್ಪು ಹಾಕಿ ಮಾಡಿದ ಪನೀರ್‌ನ್ನು ತರಿ ತರಿ ಮಾಡಿ ಹಾಕಿ. ಇದರ ಜತೆ ದಾಳಿಂಬೆ ಕೂಡ ಹಾಕಿದ್ರೆ, ಸಿಹಿಗೆಣಸಿನ ಚಾಟ್ ರೆಡಿ.

