Reels : ರೀಲ್ಸ್ ಮಾಡಲು ಹೋಗಿ ಜೀವಕ್ಕೆ ಕುತ್ತು ತಂದುಕೊಂಡ ಯುವಕ: ಸಾವು ಬದುಕಿನ ನಡುವೆ ಹೋರಾಟ

Hubballi News : ಸೋಶಿಯಲ್ ಮೀಡಿಯಾದ ಹುಚ್ಚು ಸಾಕಷ್ಟು ಜನರ ಜೀವನಕ್ಕೆ ಮಾರಕವಾಗಿದೆ. ಈ ನಡುವೆ ರೀಲ್ಸ್ ಮಾಡಲು ಹೋಗಿ ರೀಯಲ್ ಜೀವಕ್ಕೆ ಕುತ್ತು ತಂದಕೊಂಡಿರುವ ಘಟನೆಯೊಂದು ಧಾರವಾಡ ಜಿಲ್ಲೆಯ ಅಣ್ಣೀಗೆರಿ ರಸ್ತೆಯಲ್ಲಿ ನಡೆದಿದೆ.

ಹೌದು..ರೀಲ್ಸ್ ಮಾಡಲು ಹೋಗಿ ಬೈಕ್ ನಿಂದ ಬಿದ್ದ ಯುವಕನಿಗೆ ಗಂಭೀರ ಗಾಯಗೊಂಡಿದ್ದು, ಯುವಕ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಗದಗ ಜಿಲ್ಲೆಯ ನರಗುಂದ ಪಟ್ಟಣದ ನಿವಾಸಿ ಸಮೀರ್ ಎಂಬುವ ಯುವಕನೇ ಗಂಭೀರವಾಗಿ ಗಾಯಗೊಂಡಿದ್ದು, ಧಾರವಾಡ ಜಿಲ್ಲೆಯ ಅಣ್ಣಿಗೇರಿ ರಸ್ತೆಯಲ್ಲಿ ರಿಲ್ಸ್ ಮಾಡುತ್ತಿದ್ದ ಸಮೀರ್‌ ಬೈಕ್ ಮೇಲೆ ಎದ್ದು ನಿಂತು ರಿಲ್ಸ್ ಮಾಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

ಇನ್ನೂ ಬೈಕ್ ಮೇಲೆ ನಿಂತ ರೀಲ್ಸ್ ಮಾಡಲು ಹೋಗಿದ್ದು, ಬೈಕ್ ಮುಂದೇ ಹೋಗುತ್ತಿದ್ದ ಹಾಗೆ ಆಯಾ ತಪ್ಪಿ ಬಿದ್ದ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Lodge : ಹಾಸನ : ಅನೈತಿಕ ಚಟುವಟಿಕೆ ವಿಚಾರ : ಲಾಡ್ಜ್ ಮೇಲೆ ದಾಳಿ, ಮೂವರ ಬಂಧನ

Krishna River : ಕೃಷ್ಣಾ ನದಿ ತೀರದಲ್ಲಿ ಎದುರಾಗಿದೆ ಪ್ರವಾಹದ ಭೀತಿ

Notice : ಮನಸ್ಸಿಗೆ ಬಂದಂತೆ ವಾಹನ ಚಲಾಯಿಸಿದರೆ ಮನೆಗೆ ಬರಲಿದೆ ನೋಟೀಸ್..?!

About The Author