ವೈದ್ಯನಿಗೇ ಚಪ್ಪಲಿಯಿಂದ ಹೊಡೆದ ರೋಗಿಯ ಸಂಬಂಧಿಕರು: ಕಾರಣವೇನು ಗೊತ್ತಾ..?

Gujrat News: ರೋಗಿಯ ಜೊತೆ ಅಶ್ಲೀಲವಾಗಿ ನಡೆದುಕೊಂಡಾಗ, ಅಥವಾ ರೋಗಿಗೆ ಸರಿಯಾಗಿ ಟ್ರೀಟ್‌ಮೆಂಟ್ ಕೊಡದಿದ್ದಾಗ, ಅಥವಾ ರೋಗಿಗೆ ಟ್ರೀಟ್‌ಮೆಂಟ್ ಕೊಡದೇ, ಅವರ ಸಾವಿಗೆ ಕಾರಣವಾದಾಗ, ಸಂಬಂಧಿಕರಿಗೆ ಸಾಮಾನ್ಯವಾಗಿ ಕೋಪ ಬರುತ್ತದೆ. ಆಗ ಅವರು ವೈದ್ಯರ ಮೇಲೆ ಹಲ್ಲೆ ಮಾಡಿರುವ ಸಾಕಷ್ಟು ಘಟನೆಯನ್ನು ನೀವು ನೋಡಿದ್ದೀರಿ.

ಆದರೆ ಚಪ್ಪಲಿಯನ್ನು ಹೊರಗೆ ಬಿಟ್ಟು ಬನ್ನಿ ಎಂದ ಕಾರಣಕ್ಕೆ, ವೈದ್ಯರ ಮೇಲೆ ರೋಗಿಯ ಸಂಬಂಧಿಕರು ಹಲ್ಲೆ ಮಾಡಿರುವ ವಿಚಿತ್ರ ಘಟನೆ ನಡೆದಿದೆ. ಗುಜರಾತ್‌ನ ಭಾವ್‌ನಗರ್‌ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಆಸ್ಪತ್ರೆಯೊಂದರಲ್ಲಿ ವೈದ್ಯರು ರೋಗಿಯ ಸಂಬಂಧಿಕರಿಗೆ ಚಪ್ಪಲಿ ತೆಗೆದು ರೋಗಿಯನ್ನು ನೋಡಲು ಬನ್ನಿ ಎಂದು ಹೇಳಿದ್ದಾರೆ. ಇಷ್ಟೇ ಚಿಕ್ಕ ಕಾರಣಕ್ಕೆ, ರೋಗಿಯ ಸಂಬಂಧಿಕರು. ವೈದ್ಯರಿಗೇ ಚಪ್ಪಲಿಯಿಂದಲೇ ಹೊಡೆದಿದ್ದಾರೆ.

ವೈದ್ಯರಾದ ಜೈದೀಪ್ ಸಿನ್ಹಾ ಗೋಹಿಲ್ ಅವರು ರೋಗಿಯ ಸಂಬಂಧಿಕರಿಗೆ ಎಮರ್ಜೆನ್ಸಿ ರೂಮಿಗೆ ಬರುವಾಗ, ಚಪ್ಪಲಿ ತೆಗೆದಿಟ್ಟು ಬನ್ನಿ ಎಂದು ಹೇಳಿದ್ದಾರೆ. ಇನ್ನು ಗಲಾಟೆಯಾದ ಘಟನೆ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಘಟನೆಯಲ್ಲಿ ವೈದ್ಯರಿಗೆ ಗಾಯವಾಗಿರುವುದಲ್ಲದೇ, ಅಲ್ಲೇ ಇದ್ದ ಔಷಧಿ ಮತ್ತು ವೈದ್ಯಕೀಯ ಉಪಕರಣಗಳಿಗೆ ಹಾನಿಯಾಗಿದೆ. ಹಲ್ಲೆ ನಡೆಸಿದವರ ಮೇಲೆ ಕೇಸ್ ಹಾಕಲಾಗಿದ್ದು, ಜೈಲಿಗಟ್ಟಲಾಗಿದೆ.

About The Author