ನಿದ್ರಿಸುವಾಗ ಲೈಟ್ ಹಾಕಿ ಮಲಗ್ತೀರಾ..? ಹಾಗಾದ್ರೆ ನೀವ್ ದಪ್ಪಾ ಆಗೋದು ಪಕ್ಕಾ..!

ಕೆಲವ್ರಿಗೆ ನಿದ್ರೆ ಮಾಡೋವಾಗ ಲೈಟ್ ಹಾಕಿದ್ರೆ ನಿದ್ರೇನೇ ಬರೋದಿಲ್ಲ. ಇನ್ನು ಕೆಲವರಿಗೆ ಲೈಟ್ ಹಾಕಿದ್ರೆ ಮಾತ್ರ ನಿದ್ರೆ ಬರುತ್ತೆ. ಹೀಗಿರೋವಾಗ ಲೈಟ್ ಹಾಕಿಕೊಂಡು ಮಲಗಿದ್ರೆ ತೂಕ ಹೆಚ್ಚಾಗುತ್ತೆ ಅಂತ ಅಧ್ಯಯನವೊಂದು ಬಹಿರಂಗಪಡಿಸಿದೆ.

ಹೌದು ಯೂ.ಎಸ್ ನ ರಾಷ್ಟ್ರೀಯ ಆರೋಗ್ಯ ಶಿಕ್ಷಣ ಸಂಸ್ಥೆ ಈ ಕುರಿತಾಗಿ ಅಧ್ಯಯನ ನಡೆಸಿದ್ದು, ಮಲಗುವ ಕೋಣೆಯಲ್ಲಿ ಕೃತಕ ಬೆಳಕು ತೂಕ ಹೆಚ್ಚಿಸೋದಕ್ಕೆ ಕಾರಣವಾಗುತ್ತೆ ಅಂತ ಹೇಳಿದೆ. ಇದಕ್ಕಾಗಿ 43722 ಮಹಿಳೆಯರನ್ನು ಈ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರ ಪೈಕಿ ಲೈಟ್ ಹಾಕಿ ಮಲಗುತ್ತಿದ್ದವರಲ್ಲಿ ಸುಮಾರು 11 ಪೌಂಡ್ ತೂಕ ಹೆಚ್ಚಾಗಿದ್ದು ಕಂಡುಬಂದಿದೆ. ಹಾಗೇ ಟಿವಿ ಹಾಕಿದಾಗ ಹೊರಬರೋ ಲೈಟ್ ನಿಂದಲೂ ತೂಕ ಹೆಚ್ಚಾಗಿದ್ದು ಈ ಅಧ್ಯಯನದಿಂದ ತಿಳಿದುಬಂದಿದೆ.

ಇನ್ನು ಹಾಗೆ ನೋಡೋದಾದ್ರೆ ಹೆಚ್ಚಿನವರಲ್ಲಿ ಲೈಟ್ ಹಾಕಿದ್ರೆ ನಿದ್ರೆ ಬರೋದಿಲ್ಲ. ಇದು ನಿದ್ರಾ ಹೀನತೆಗೆ ಕಾರಣವಾಗಿ ತೂಕ ಹೆಚ್ಚಾಗ್ತಾರೆ ಅನ್ನೋ ಅಂಶವನ್ನು ಇತರೆ ಅಧ್ಯಯನಗಳು ಈಗಗಾಲೇ ಬಹಿರಂಗಪಡಿಸಿವೆ.

ಈ ಬೀಚ್ ಗೆ ಹೋಗೋ ಮುನ್ನ ಎಚ್ಚರ ಎಚ್ಚರ!! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=U4DonKUkS1U

About The Author