Monday, October 2, 2023

Latest Posts

ಪ್ರಧಾನಿ ಮೋದಿ ಹೊಗಳಿದ ಕ್ರಿಕೆಟ್ ದೇವರು..!

- Advertisement -

ಟೀಂ ಇಂಡಿಯಾ ಆಟಗಾರರ ಸಹಿಯುಳ್ಳ ಕ್ರಿಕೆಟ್ ಬ್ಯಾಟನ್ನು ಮಾಲ್ಡೀವ್ಸ್ ಅಧ್ಯಕ್ಷರಿಗೆ ಪ್ರಧಾನಿ ನರೇಂದ್ರ ಉಡುಗೊರೆಯಾಗಿ ನೀಡಿದ್ದನ್ನು ಕ್ರಿಕೆಟ್ ದೇವರು ಸಚಿನ್ ಶ್ಲಾಘಿಸಿದ್ದಾರೆ.

‘ವಿಶ್ವಕಪ್ ಕ್ರಿಕೆಟ್ ನಡೆಯುತ್ತಿರೋ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಈ ನಡೆ ಕ್ರಿಕೆಟ್ ರಾಜತಂತ್ರಕ್ಕೆ ಸಾಕ್ಷಿಯಾಗಿದೆ. ಕ್ರಿಕೆಟ್ ಆಟಕ್ಕೆ ಉತ್ತೇಜನ ನೀಡುತ್ತಿರೋದಕ್ಕೆ ಧನ್ಯವಾದಗಳು’ ಅಂತ ಸಚಿನ್ ತೆಂಡೂಲ್ಕರ್ ಪ್ರಧಾನಿಯವರನ್ನು ಅಭಿನಂದಿಸಿದ್ದಾರೆ.

ಜೂನ್ 8ರಂದು ಪ್ರಧಾನಿ ಮೋದಿ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೋಲಿಹ್ ರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಅವರಿಗೆ ಮೋದಿ ಟೀಂ ಇಂಡಿಯಾ ಪ್ಲೇಯರ್ಸ್ ಸಹಿ ಇರುವ ಕ್ರಿಕೆಟ್ ಬ್ಯಾಟ್ ನೀಡಿದ್ರು. ಅಲ್ಲದೆ ನನ್ನ ಸ್ನೇಹಿತ ಇಬ್ರಾಹಿಂ ಮೊಹಮದ್ ಸೋಲಿಹ್ ಕ್ರಿಕೆಟ್ ನ ಬಹುದೊಡ್ಡ ಅಭಿಮಾನಿ, ಹೀಗಾಗಿ ಅವರಿಗೆ ಕ್ರಿಕೆಟ್ ಬ್ಯಾಟ್ ಉಡುಗೊರೆಯಾಗಿ ನೀಡಿರುವೆ ಅಂತ ಟ್ವೀಟ್ ಮಾಡಿದ್ದರು.

ಇನ್ನು ಪ್ರಧಾನಿ ಮೋದಿ ಮಾಲ್ಡೀವ್ಸ್ ನಲ್ಲಿ ಕ್ರಿಕೆಟ್ ಪ್ರೋತ್ಸಾಹಿಸಲು ಭಾರತ ನೆರವಾಗೋದಾಗಿ ಮಾಲ್ಡೀವ್ಸ್ ಅಧ್ಯಕ್ಷರಿಗೆ ಮಾತು ಕೊಟ್ಟಿದ್ದಾರೆ. ಹೀಗಾಗಿ ಈಗಾಗಲೇ ಭಾರತ ಅಲ್ಲಿ ಕ್ರಿಕೆಟ್ ತರಬೇತಿ ನೀಡುತ್ತಿದ್ದು, ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸುತ್ತಿದೆ ಅಂತ ವಿದೇಶಾಂಗ ಕಾರ್ಯಾಲಯ ತಿಳಿಸಿದೆ.

ಧೋನಿ ಆಯ್ತು, ಈಗ ಕ್ರಿಸ್ ಗೇಲ್. ತಪ್ಪು ಮಾಡಿದ್ರಾ ಗೇಲ್…?? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=ryVnx-toqfo
- Advertisement -

Latest Posts

Don't Miss