ಧಾರವಾಡ: ಕಳೆದ ನಾಲ್ಕು ವರ್ಷಗಳಿಂದ ಪಂಚಮಸಾಲಿ ಸಮುದಾಯದವರು 2ಎ ಮೀಸಲಾತಿ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಈ ಸಮುದಾಯದವರಿಗೆ ಮೀಸಲಾತಿ ಜಾರಿಯಾಗಿಲ್ಲ. ಕಳೆದ ಬಿಜೆಪಿ ಸರ್ಕಾರದಲ್ಲಿಯೂ ಸಹ ಸಾಕಷ್ಟು ದಿನಗಳ ಕಾಲ ಅನಿರ್ದಿಷ್ಟ ಧರಣಿ ಕೈಗೊಂಡರು ಯಾವುದೇ ಪ್ರತಿಫಲ ದೊರೆತಿಲ್ಲ ಹಾಗಾಗಿ ಮತ್ತೊಮ್ಮೆ ಧರಣಿ ಕೈಗೊಳ್ಳಲು ಮುಂದಾಗಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿಯಾದರೂ ನಮ್ಮ ಹೋರಾಟಕ್ಕೆ ನ್ಯಾಯ ಸಿಗಬಹುದು ಎನ್ನುವ ನಂಬಿಕೆಯಿಂದ ಧಾರವಾಡದಲ್ಲಿ ಜಯಮೃತ್ಯುಂಜಯ ಸ್ವಾಮಿಜಿಗಳು 2ಎ ಮೀಸಲಾತಿಗಾಗಿ ಆಗ್ರಹಿಸಿ ಮತ್ತೆ ಹೋರಾಟ ಶುರುಮಾಡುವುದಾಗಿ ಹೇಳಿಕೆ ನೀಡಿದ್ದಾರೆ.
ಲೋಕಸಭಾ ಚುಣಾವಣೆಯೊಳಗೆ ನಮಗೆ ಕಾಂಗ್ರೆಸ್ ಸರಕಾರ 2 ಎ ಮೀಸಲಾತಿ ಕೊಡುತ್ತೆ ಎಂಬ ನೀರಿಕ್ಷೆ ಇದೆ, ಕಳೆದ 4 ವರ್ಷಗಳಿಂದ ಮೀಸಲಾತಿಗಾಗಿ ಆಗ್ರಹಿಸಿ ಹೋರಾಟ ಮಾಡುತ್ತಿರುವ ಸ್ವಾಮೀಜಿ ಬರುವ ಅಕ್ಟೋಬರ್ 13 ರಂದು ಹುಬ್ಬಳ್ಳಿಯ ಗಬ್ಬೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟ ಲಿಂಗ ಪೂಜೆ ಮಾಡುವ ಮುಖಾಂತರ ಹೋರಾಟ ಮಾಡುತ್ತೆವೆ.
2ಎ ಮೀಸಲಾತಿ ಬೇಡ ಎಂದಿರುವ ಸಿಎಂ ಸಿದ್ದರಾಮಯ್ಯ ಅವರು ನಮ್ಮನ್ನ ಕರೆಸಿ ಮಾತನಾಡಬೇಕು. ಕಾಂಗ್ರೆಸ್ ಸರಕಾರ 6ನೇಯ ಹಂತದ ಹೋರಾಟದಲ್ಲಿ ನಮಗೆ ನ್ಯಾಯ ಒದಗಿಸುತ್ತದೆ ಎಂದು ನಂಬಿಕೆ ಇದೆ. 7 ನೇಯ ಹಂತದ ಹೋರಾಟಕ್ಕೆ ಅನುವು ಮಾಡಿಕೊಡಬಾರದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರು ಲಿಂಗಾಯತ ಅಧಿಕಾರಿ ಗಳಿಗೆ ಸಿಗುವ ಸ್ಥಾನಮಾನ ಸಿಗುತ್ತಿಲ್ಲ ಎಂದು ಹೇಳಿರುವ ಹೇಳಿಕೆಯಲ್ಲಿ ಅರ್ಥ ಇದೆ ಅವರು ಹಿರಿಯ ನಾಯಕರು ಅವರು ಲಿಂಗಾಯತ ಅಧಿಕಾರಿಗಳಿಗೆ ಆದ ನೋವನ್ನ ಹೇಳಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಎಲ್ಲವನ್ನ ಸರಿ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಸ್ತೆಯ ಮಧ್ಯೆ ಎತ್ತಿನಗಾಡಿ ನಿಲ್ಲಿಸಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಕೈಗೊಂಡ ರೈತರು..!
ಎಸ್ಇಪಿ ಎಂದರೆ ಸೋನಿಯಾ ಗಾಂಧಿ ಎಜಿಕೇಶನ್ ಪಾಲಿಸಿ ಏನು.? ಕಾಂಗ್ರೆಸ್ ಗೆ ಕಾಗೇರಿ ಪ್ರಶ್ನೆ.!