ರಾಯಚೂರು: ಜಿಲ್ಲೆಯ ಸಿಂದನೂರು ತಾಲೂಕಿನ ಆರ್ ಹೆಚ್ ಕ್ಯಾಂಪ್ 1 ರಲ್ಲಿ ಕಳೆದ ಆಗಸ್ಟ್ 2 ರಂದು ಗ್ರಾಮ ಪಂಚಾಯಿತಿ ಚುನಾವಣೆ ನಡೆದಿದ್ದು ಈ ಚುನಾವಣೆ ಮುಗಿದ ಬಳಿಕ 15 ಜನ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆಯನ್ನು ನೀಡಿದ್ದಾರೆ.
ಹೌದು ಚುನಾವಣೆ ಮುಗಿದು ಇನ್ನು ಮೂರು ದಿನ ಸಹ ಆಗಿಲ್ಲ ಆಗಲೆ ಸದಸ್ಯರು ರಾಜೀನಾಮೆ ಘೋಷಿಸಿದ್ದಾರೆ. ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯರಿಗೆ ಮೀಸಲಾಗಿತ್ತು ಇದನ್ನು ಹೊರತುಪಡಿಸಿ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಅಸಮದಾನಗೊಂಡ 15 ಜನ ಸದಸ್ಯರು ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ನ 19 ಸದಸ್ಯರ ಬೆಂಬಲದೊಂದಿಗೆ ಮುಸ್ಲಿಂ ಸಮುದಾಯದ ಎಂ ರಹಮದ್ ಪಾಷ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು ಜೆಡಿಎಸ್ ಬಿಜೆಪಿಯಲ್ಲಿ ಗುರುತಿಸಿಕೊಂಡ 15 ಜನ ಸದಸ್ಯರು ಕಳೆದ 15 ವರ್ಷಗಳ ಹಿಂದೆ ನಮಗೆ ಅಧ್ಯಕ್ಷ ಸ್ಥಾನ ಬಂದಿದ್ದು, ಇಲ್ಲಿವರೆಗೂ ನಮಗೆ ಮತ್ತೆ ಅಧ್ಯಕ್ಷ ಸ್ಥಾನದ ಅವಕಾಶ ಬಂದಿಲ್ಲ. ಈಗ ಅಧ್ಯಕ್ಷ ಸ್ಥಾನದ ಅವಕಾಶ ಬಂದಿದೆ. ಆದ್ದರಿಂದ ನಮ್ಮನ್ನು ಅಧ್ಯಕ್ಷರನ್ನಾಗಿ ಮಾಡದೆ ಅಲ್ಪಸಂಖ್ಯಾತರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ನಮ್ಮೆಲ್ಲರ ವಿರೋಧ ಇದೆ ಎಂದು ಅಸಮಧಾನಗೊಂಡಿರುವ 15 ಜನ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆಗೆ ಮುಂದಾಗಿದ್ದಾರೆ.
Rotary Elite: ಹುಬ್ಬಳ್ಳಿ ರೋಟರಿ ಎಲೈಟ್‍ನಿಂದ ವಿಶ್ವ ಸ್ತನಪಾನ ದಿನ ಆಚರಣೆ
Finance support: ಮೃತ ರೈತ ಕುಟುಂಬಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸಾಂತ್ವನ; ಆರ್ಥಿಕ ನೆರವು..!
Law student: ಪಿಜಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಕಾನೂನು ವಿದ್ಯಾರ್ಥಿ