Tuesday, April 22, 2025

Latest Posts

ರಾಜ ಮತ್ತು ಸಾಡೇಸಾಥಿ ಕಥೆ (ಶನಿವಾರ ವೃತ ಕಥೆ)- ಭಾಗ 2

- Advertisement -

Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಕಥೆಯ ಅರ್ಧಭಾಗವನ್ನು ಮೊದಲೇ ಹೇಳಿದ್ದೇವೆ. ಈಗ ವಿಕ್ರಮಾದಿತ್ಯನಿಗೆ ಕಾಟ ಕೊಡಲು ಶನಿ ಏನೇನು ಮಾಡುತ್ತಾನೆಂದು ತಿಳಿದುಕೊಳ್ಳೋಣ ಬನ್ನಿ..

ರಾಜಾ ವಿಕ್ರಮಾದಿತ್ಯನಿಗೆ ಸಾಡೇಸಾಥಿ ಶನಿ ಶುರುವಾದಾಗ, ಶನಿದೇವ ಕುದುರೆ ವ್ಯಾಪಾರಿಯ ವೇಷ ಧರಿಸಿ, ಹಲವಾರು ಕುದುರೆ ಹಿಡಿದು, ವಿಕ್ರಮಾದಿತ್ಯನ ಹತ್ತಿರ ಬರುತ್ತಾನೆ.  ವಿಕ್ರಮಾದಿತ್ಯ ಕುದುರೆ ಖರೀದಿ ಮಾಡಲು, ಕುದುರೆ ಸವಾರಿ ಮಾಡುತ್ತಾನೆ. ಆದರೆ ಆ ಕುದುರೆ ದೂರದ ಕಾಡಿಗೆ ಓಡಿ, ಅಲ್ಲಿ ವಿಕ್ರಮಾದಿತ್ಯನನ್ನು ಕೆಡವಿ, ಅದೃಷ್ಯವಾಗುತ್ತದೆ. ರಾಜ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಒಂದು ನಗರಕ್ಕೆ ಬರುತ್ತಾನೆ. ಅಲ್ಲಿ ಓರ್ವ ವ್ಯಾಪಾರಿಯ ಅಂಗಡಿಯಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆಯುತ್ತಾನೆ. ರಾಜ ಬಂದು ಕುಳಿತಾಗಿಂದ, ವ್ಯಾಪಾರಿಯ ವ್ಯಾಪಾರ ಅತ್ಯುತ್ತಮವಾಗಿ ನಡೆಯುತ್ತದೆ. ಆಗ ಆ ವ್ಯಾಪಾರಿಗೆ, ಈ ರಾಜ ನನಗೆ ಭಾಗ್ಯಶಾಲಿಯಾಗಿದ್ದಾನೆ. ಇವನು ಇಲ್ಲಿ ಇದ್ದಷ್ಟು ಹೊತ್ತು, ನನ್ನ ವ್ಯಾಪಾರ ಅತ್ಯುತ್ತಮವಾಗಿದೆ ಎಂದುಕೊಳ್ಳುತ್ತಾನೆ.

ಅಲ್ಲದೇ, ಆ ರಾಜನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ, ಊಟ ಮಾಡಿಸುತ್ತಾನೆ. ಮತ್ತು ನೀವು ಇಲ್ಲೇ ಕೊಂಚ ಹೊತ್ತು ವಿಶ್ರಾಂತಿ ಪಡೆಯಿರಿ. ನಾನು ವ್ಯಾಪಾರ ಮುಗಿಸಿ ಬರುತ್ತೇನೆಂದು ಹೇಳಿ ವ್ಯಾಪಾರಿ ಹೊರಡುತ್ತಾನೆ. ವಿಕ್ರಮಾದಿತ್ಯ ಇದ್ದ ಜಾಗದಲ್ಲಿ ಒಂದು ಚಿನ್ನದ ಸರವಿರುತ್ತದೆ. ಆದರೆ ವ್ಯಾಪಾರಿ ವ್ಯಾಪಾರ ಮುಗಿಸಿ ಬರುವುದರಲ್ಲಿ, ಆ ಚಿನ್ನದ ಸರ ಮಾಯವಾಗಿರುತ್ತದೆ. ಆಗ ವ್ಯಾಪಾರಿ ರಾಜನ ಮೇಲೆ ಆಪಾದನೆ ಹೊರಿಸಿ, ಆ ನಗರದ ರಾಜನ ಬಳಿ ಕರೆದೊಯ್ಯುತ್ತಾನೆ.

ರಾಜ , ವ್ಯಾಪಾರಿಯ ಚಿನ್ನದ ಸರದ ಬಗ್ಗೆ ಕೇಳಿದಾಗ, ನಾನು ಮಲಗೇಳುವಷ್ಟರಲ್ಲಿ ಆ ಚಿನ್ನದ ಸರ ಮಾಯವಾಗಿತ್ತು ಎಂದು ವಿಕ್ರಮಾದಿತ್ಯ ಹೇಳುತ್ತಾನೆ. ಕೋಪಗೊಂಡ ರಾಜ, ಇವನ ಕೈ ಕಾಲು ಕತ್ತರಿಸಿ ಎನ್ನುತ್ತಾನೆ. ರಾಜನ ಆಜ್ಞೆಯಂತೆ, ವಿಕ್ರಮಾದಿತ್ಯನ ಕೈ ಕಾಲು ಮುರಿದು, ಬೀದಿಗೆ ಎಸೆಯಲಾಗುತ್ತದೆ. ಆದರೆ ಅಲ್ಲೇ ವಾಸವಾಗಿದ್ದ ಓರ್ವ ರೈತ, ವಿಕ್ರಮಾದಿತ್ಯನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಟ್ಟು, ಕೆಲಸವನ್ನೂ ಕೊಡುತ್ತಾನೆ. ವಿಕ್ರಮಾದಿತ್ಯ ಕುಳಿತಲ್ಲೇ ಕೆಲಸ ಮಾಡುತ್ತ, ರೈತ ಕೊಡುವ ಅನ್ನ ಉಣ್ಣುತ್ತ ಜೀವನ ಕಳೆಯುತ್ತಾನೆ. ಹೀಗೆ ವಿಕ್ರಮಾದಿತ್ಯನ ಏಳುವರೆ ವರ್ಷ ಮುಗಿಯುತ್ತದೆ.

ಒಮ್ಮೆ ರಾಜ ಮೇಘ ಮಲ್ಹಾರ ರಾಗವನ್ನು ಹಾಡುತ್ತಾನೆ. ಅವನ ಹಾಡನ್ನು ಕೇಳಿದ ಅಲ್ಲಿನ ರಾಜನ ಪುತ್ರಿ, ಅವನ ಹಾಡಿಗೆ ಮೈ ಮರೆತು ಅವನನ್ನು ವಿವಾಹವಾಗಲು ಇಚ್ಛಿಸುತ್ತಾಳೆ. ಆದರೆ ಅವಳ ಅಪ್ಪ ಅವಳನ್ನು ವಿಕ್ರಮಾದಿತ್ಯನ ಜೊತೆ ವಿವಾಹ ಮಾಡಲು ಒಪ್ಪುವುದಿಲ್ಲ. ಏಕೆಂದರೆ, ಆ ವೇಳೆ ವಿಕ್ರಮಾದಿತ್ಯನ ಕೈ ಕಾಲು ಮುರಿದಿರುತ್ತದೆ. ಆದ್ದರಿಂದ ಆ ರಾಜ, ಮೋಹಿನಿ ನಿನ್ನ ಜಾತಕದಲ್ಲಿ ನೀವು ರಾಜನನ್ನು ವಿವಾಹವಾಗುತ್ತಿ ಎಂದು ಬರೆದಿದೆ. ಇವನಿಗೆ ಕೈ ಕಾಲು ಇಲ್ಲ. ಕನಿಷ್ಟ ತನ್ನ ಕೆಲಸ ಮಾಡಿಕೊಳ್ಳಲು ಇವನು ಒದ್ದಾಡುತ್ತಿದ್ದಾನೆ. ಇಂಥವನನ್ನು ನಿನ್ನ ಜೊತೆ ವಿವಾಹ ಮಾಡಿ ಕೊಡಲಾರೆ ಎನ್ನುತ್ತಾರೆ. ಆದರೂ ಹಠ ಮಾಡಿ, ಮೋಹಿನಿ ವಿಕ್ರಮಾದಿತ್ಯನನ್ನು ವಿವಾಹವಾಗುತ್ತಾಳೆ.  ಅದೇ ದಿನ ಶನಿದೇವ ವಿಕ್ರಮಾದಿತ್‌ಯನ ಕನಸಿನಲ್ಲಿ ಬಂದು, ನೀನು ನನಗಂದು ಮಾಡಿದ ಅವಮಾನಕ್ಕೆ 7ವರೆ ವರ್ಷಗಳ ಕಾಲ ನಾನು ನಿನಗೆ ಈ ಶಿಕ್ಷೆ ಕೊಟ್ಟಿದ್ದೇನೆ ಎನ್ನುತ್ತಾನೆ. ಈ ಕಥೆ ಮುಂದುವರಿಯಲಿದೆ.

ಇಲ್ಲಿನ ಜನ ತಮ್ಮ ಮಕ್ಕಳನ್ನು ನಾಯಿಯೊಂದಿಗೆ ವಿವಾಹ ಮಾಡಿಸುತ್ತಾರೆ..

ಕಾಳ ಸರ್ಪ ದೋಷವಿದ್ದಲ್ಲಿ, ಯಾವ ಸೂಚನೆ ಇರುತ್ತದೆ..? ಎಂಥ ಘಟನೆಗಳು ನಡೆಯುತ್ತದೆ..?

ದುರ್ಯೋಧನ ಭಾನುಮತಿಯನ್ನು ವಿವಾಹವಾಗಿದ್ದು ಹೇಗೆ..?

- Advertisement -

Latest Posts

Don't Miss