Monday, October 6, 2025

Latest Posts

ನಿಖಿಲ್ ಕುಮಾರ್ ಬರ್ತ್ ಡೇಗೆ ರಿಲೀಸ್ ಆಗ್ತಿದೆ ಬಹುನಿರೀಕ್ಷಿತ ‘ರೈಡರ್’ ಸಿನಿಮಾ ಟೀಸರ್…!

- Advertisement -

ಕನ್ನಡ ಚಿತ್ರರಂಗದ ಯುವರಾಜ, ಜಾಗ್ವರ್ ಸ್ಟಾರ್ ನಿಖಿಲ್ ಕುಮಾರಸ್ವಾಮಿ ನಟನೆಯ ಬಹುನಿರೀಕ್ಷಿತ ಚಿತ್ರ ರೈಡರ್. ಸದ್ಯ ಶೂಟಿಂಗ್ ಅಖಾಡದಲ್ಲಿರುವ ರೈಡರ್ ಅಂಗಳದಲ್ಲಿ ಸೆನ್ಸೇಷನಲ್ ನ್ಯೂಸ್ ವೊಂದು ರಿವೀಲ್ ಆಗಿದೆ. ಜನವರಿ 22ರಂದು ನಿಖಿಲ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಖತ್ ಗಿಫ್ಟ್ ಸಿಕ್ತಿದೆ.

ಈಗಾಗ್ಲೇ 40ರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿರೋ ರೈಡರ್ ಸಿನಿಮಾ ತಂಡ ನಿಖಿಲ್ ಹುಟ್ದಬ್ಬಕ್ಕೆ ಟೀಸರ್ ರಿಲೀಸ್ ಮಾಡಲು ಯೋಜನೆ ಹಾಕಿಕೊಂಡಿದೆ. ಹತ್ತು ದಿನಗಳು ಬಾಕಿ ಇರುವಾಗ್ಲೇ ಟೀಸರ್ ರಿಲೀಸ್ ಬಗ್ಗೆ ಮಾಹಿತಿ ನೀಡಿದ್ದು, ಯುವರಾಜನ ಭಕ್ತಗಣ ಸಖತ್ ಎಕ್ಸೈಟ್ ಆಗಿದ್ದಾರೆ. ಈಗಾಗ್ಲೇ ರಿಲೀಸ್ ಆಗಿರೋ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಟೀಸರ್ ಗೂ ಸಖತ್ ರೆಸ್ಪಾನ್ಸ್ ಸಿಗೋ ನಿರೀಕ್ಷೆಯಲ್ಲಿದೆ ಚಿತ್ರತಂಡ.

ಅಂದಹಾಗೇ ರೈಡರ್ ಸಿನಿಮಾಕ್ಕೆ ವಿಜಯ್ ಕುಮಾರ್ ಕೊಂಡ ಆ್ಯಕ್ಷನ್ ಕಟ್ ಹೇಳಿದ್ದು, ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.

- Advertisement -

Latest Posts

Don't Miss