Saturday, July 27, 2024

Latest Posts

ರಿಷಭ್​ ಶೆಟ್ಟಿ ಕಾಂತಾರ ಸಂಭಾವನೆ ಎಷ್ಟು ಗೊತ್ತಾ ??

- Advertisement -

ರಿಷಭ್​ ಶೆಟ್ಟಿ ನಿರ್ದೇಶನದ ಮತ್ತು ಅಭಿನಯದ ‘ಕಾಂತಾರ’ ಚಿತ್ರವು ಈಗಾಗಲೇ ಬಾಕ್ಸ್​ಆಫೀಸ್​ ಧೂಳೀಪಟ ಮಾಡುವುದರ ಜತೆಗೆ ಹಲವು ದಾಖಲೆಗಳನ್ನು ಮಾಡಿದೆ. ಜಗತ್ತಿನಾದ್ಯಂತ 400ಕ್ಕೂ ಹೆಚ್ಚು ಕೋಟಿ ಗಳಿಕೆ ಮಾಡುವ ಮೂಲಕ, ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರದ ಪಟ್ಟಿಯಲ್ಲೂ ಸೇರ್ಪಡೆಯಾಗಿದೆ.

ಚಿತ್ರದ ಬಜೆಟ್​ ಎಷ್ಟಿರಬಹುದು ಮತ್ತು ಯಾರ್ಯಾರು ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬ ಚರ್ಚೆಯೊಂದು ಶುರುವಾಗಿದೆ. ಮೂಲಗಳ ಪ್ರಕಾರ, ಚಿತ್ರದ ಬಜೆಟ್​ 16 ಕೋಟಿ ರೂ.ಗಳಾಗಿದ್ದು, ಅದರಲ್ಲಿ ರಿಷಭ್​ ಶೆಟ್ಟಿ ಅವರ ಸಂಭಾವನೆಯೇ ಕಾಲು ಭಾಗದಷ್ಟಿದೆ ಎಂದು ಹೇಳಲಾಗಿದೆ.

ಹೌದು, ಈ ಚಿತ್ರದ ಕಥೆ-ಚಿತ್ರಕಥೆ, ನಟನೆ ಮತ್ತು ನಿರ್ದೇಶನಕ್ಕೆ ರಿಷಭ್ ಶೆಟ್ಟಿ ನಾಲ್ಕು ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ನಟ ಕಿಶೋರ್​ ಅವರಿಗೆ ಒಂದು ಕೋಟಿ ರೂ.ಗಳನ್ನು ಸಂಭಾವನೆಯನ್ನಾಗಿ ನೀಡಲಾಗಿದೆಯಂತೆ. ಇನ್ನು, ಅಚ್ಯುತ್​ ಕುಮಾರ್​ ಅವರಿಗೆ 40 ಲಕ್ಷ ರೂ. ಸಂಭಾವನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಮಿಕ್ಕ ಬಜೆಟ್​ ಚಿತ್ರದ ಮೇಕಿಂಗ್​, ಸಂಭಾವನೆ ಮತ್ತು ಪ್ರಚಾರಕ್ಕೆ ಖರ್ಚಾಗಿದೆಯಂತೆ.

- Advertisement -

Latest Posts

Don't Miss