ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ರಿಷಬ್ ಶೆಟ್ಟಿ. ನಿರ್ದೇಶಕನಾಗಿ ಸಿನಿ ಇಂಡಸ್ಟ್ರೀಗೆ ಎಂಟ್ರಿ ಕೊಟ್ಟ ರಿಷಬ್ ಇಂದು ಸಕ್ಸಸ್ ಫುಲ್ ನಟನಾಗಿ ತೆರೆ ಮೇಲೆ ಮಿಂಚ್ತಿದ್ದಾರೆ. ಸದ್ಯ ರಿಷಬ್ ಶೆಟ್ಟಿ ರುದ್ರಪ್ರಯಾಗ ಸಿನಿಮಾ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗ್ಲೇ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು ಕ್ಯೂರಿಯಾಸಿಟಿ ಹುಟ್ಟುಹಾಕ್ತಿದೆ. ಇದೀಗ ರುದ್ರಪ್ರಯಾಗ ಚಿತ್ರಕ್ಕೆ ಕನ್ನಡದ ಹಿರಿಯ ನಟ ಅನಂತ್ ನಾಗ್ ಎಂಟ್ರಿ ಕೊಟ್ಟಿದ್ದಾರೆ. ಸ್ವತಂ ರಿಷಬ್ ಈ ವಿಷ್ಯವನ್ನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಂದಹಾಗೇ ಅನಂತ್ ನಾಗ್ ಈಗಾಗ್ಲೇ ರಿಷಬ್ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾದಲ್ಲಿ ಅಭಿನಯಿಸಿದ್ರು. ಅನಂತ ಪದ್ಮನಾಭ ಪಿ ಪಾತ್ರಕ್ಕೆ ಜೀವತುಂಬಿ ಮಕ್ಕಳೊಡನೆ ಮಕ್ಕಳಾಗಿ ಆ ಚಿತ್ರದ ನೆನಪುಗಳಿನ್ನು ಹಸಿರಾಗಿರುವಾಗ್ಲೇ ನನ್ನ ಮುಂದಿನ ಸಿನಿಮಾ ರುದ್ರಪ್ರಯಾಗ ಚಿತ್ರದಲ್ಲಿ ಅನಂತ್ ಸರ್ ಗೆ ಆಕ್ಷನ್ ಕಟ್ ಹೇಳ್ತಿದ್ದೇನೆ ಅಂತಾ ರಿಷಬ್ ಬರೆದುಕೊಂಡಿದ್ದಾರೆ. ಇನ್ನು. ರುದ್ರಪ್ರಯಾಗ ಚಿತ್ರಕ್ಕೆ ಜಯಣ್ಣ ಬಂಡವಾಳ ಹೂಡಿದ್ದಾರೆ.