Saturday, April 12, 2025

Latest Posts

ಹೋಪ್ ಇದೆ, ರಕ್ಷಿತ್ ಮಾಡದ್ದನ್ನ, ರಿಷಭ್ ಮಾಡ್ತಾರೆ ಅಂದ್ರು ಪ್ರಮೋದ್ ಶೆಟ್ಟಿ..!

- Advertisement -

ಈ ಶೆಟ್ಟರ ಪಾರ್ಟಿ ಸ್ಯಾಂಡಲ್‌ವುಡ್ಡಲ್ಲಿ ಕ್ರಿಯೇಟಿವ್ ಸಿನಿಮಾಗಳ ಮೂಲಕ ಸಿನಿಪ್ರಿಯರ ಫೇವರಿಟ್ ಆಗ್ಬಿಟ್ಟಿದೆ. ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಈಗ ಈ ಶೆಟ್ಟರ ಗ್ಯಾಂಗ್‌ನ ಬಗ್ಗೆ ಹೋಪ್‌ಫುಲ್ಲಾಗಿ ಮಾತಾಡಿರೋದು ಪ್ರಮೋದ್ ಶೆಟ್ಟಿ. ಪ್ರಮೋದ್ ಶೆಟ್ಟರು ಆಕ್ಟ್ ಮಾಡಿರೋ ಹೋಪ್ ಸಿನಿಮಾ ಜುಲೈನಲ್ಲಿ ರಿಲೀಸ್ ಆಗ್ತಿದೆ. ಇಲ್ಲಿ ಕರಪ್ಟ್ ಕೆ.ಎ.ಎಸ್ ಆಪೀಸರ್ ಪಾತ್ರ ಮಾಡಿರೋ ಪ್ರಮೋದ್ ಶೆಟ್ಟಿ ಈಗ ಪಾತ್ರಗಳೇ ನನ್ನನ್ನು ಹುಡುಕಿ ರ‍್ತಿವೆ. ಐಆಮ್‌ಲಕ್ಕಿ ಅಂದ್ರು.
ರಾಜಕೀಯ, ಅಧಿಕಾರದ ಕಥೆ ಇರೋ ಹೋಪ್‌ನಲ್ಲಿ ಶ್ವೇತಾ ಶ್ರೀವಾತ್ಸವ್ ಧಕ್ಷ ಪೊಲೀಸ್ ಪಾತ್ರ ಮಾಡಿದ್ರೆ, ಸಿಎಂ ಪಾತ್ರದಲ್ಲಿ ಸುಮಲತಾ ಅಂಬರೀಷ್ ಇದ್ದಾರೆ. ಇನ್ನು ಲಾಯರ್ ಪಾತ್ರ ಮಾಡಿರೋದು ಖ್ಯಾತ ನಟ ಪ್ರಕಾಶ್ ಬೆಳವಾಡಿ. ಹೀರೋ ಹೀರೋಯಿನ್ ಇಲ್ಲದ ಸಿನಿಮಾ ಪ್ರತೀ ಪಾತ್ರವೂ ಮುಖ್ಯ ಅಂತ ಹೇಳಿದ ಪ್ರಮೋದ್ ಶೆಟ್ಟಿ. ರಾಜಕೀಯಕ್ಕೆ ಬರೋ ಆಸಕ್ತಿ ಇಲ್ಲ ಆದ್ರೆ ನಮ್ಮ ಗುಂಪಲ್ಲಿ ರಿಷಭ್ ಶೆಟ್ಟಿ ಬರೋ ದಿನಗಳಲ್ಲಿ ರಾಜಕೀಯಕ್ಕೆ ರ‍್ತಾರೆ ಅನ್ಸುತ್ತೆ. ಯಾಕಂದ್ರೆ ಅವ್ರಲ್ಲಿ ರಾಜಕೀಯದ ಬಗ್ಗೆ ಸ್ಪಷ್ಟ ನಿಲುವಿದೆ.
ನಾವೆಲ್ಲಾ ಸಿನಿಮಾದಲ್ಲೇ ರ‍್ತೀವಿ. ರಕ್ಷಿತ್ ಕೂಡ ಸಿನಿಮಾ ಬಿಟ್ಟು ಬೇರೆ ಯೋಚನೆ ಮಾಡಲ್ಲ, ನನಗೂ ಅಂತಹ ಯೋಚನೇನೇ ಬರಲ್ಲ. ಆದ್ರೆ ರಿಷಭ್ ಮಾತ್ರ ಅಂತಹ ವಿಷ್ಯದ ಬಗ್ಗೆ ಹೆಚ್ಚು ಆಸಕ್ತಿ ತೋರಿಸ್ತಾರೆ. ನಾನು ಅದರ ಬಗ್ಗೆ ಈಗ್ಲೇ ಜಾಸ್ತಿ ಮಾತಾಡಬೇಡ ಸಿನಿಮಾಗಳಿದೆ ಅಂತ ಹೇಳ್ತೀನಿ ಅಂದ್ರು. ರಾಜ್ಯದಲ್ಲಿ ಒಳ್ಳೆಯ ಆಫೀಸರ್‌ಗಳೂ ಇದ್ದಾರೆ, ಒಳ್ಳೆಯವರಾಗ್ತಾನೂ ಇದ್ದಾರೆ. ನನಗೆ ಈ ಕೆ.ಎ.ಎ¸.ï ಆಪೀಸರ್ ಪಾತ್ರ ಒಳ್ಳೆಯ ಅನುಭವ ಕೊಡ್ತು ಅಂತ ಖುಷಿಯಾದ್ರು ಪ್ರಮೋದ್ ಶೆಟ್ಟಿ. ಪ್ರಮೋದ್ ಶೆಟ್ಟಿ ಪೂರ್ತಿ ಮಾತುಗಳು ಕರ್ನಾಟಕ ಟಿವಿ ಯೂಟ್ಯೂಬ್ ಚಾನೆಲ್ನಲ್ಲಿ ಸದ್ಯದಲ್ಲೇ ಬರುತ್ತೆ ಮಿಸ್ ಮಾಡ್ಕೋಬೇಡಿ

ಓಂ, ಕರ್ನಾಟಕ ಟಿವಿ

 

- Advertisement -

Latest Posts

Don't Miss