Tuesday, November 18, 2025

Latest Posts

ಅಪಾಯ ತಪ್ಪಲ್ಲ! ಪ್ಯಾನ್ ಇಂಡಿಯಾ ಆಗೋದು ಹೇಗೆ? Nagathihalli Chandrashekhar Podcast

- Advertisement -

Sandalwood News:  ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಮಾತನಾಡಿರುವ ನಾಗತೀಹಳ್ಳಿ ಚಂದ್ರಶೇಖರ್, ಪ್ಯಾನ್ ಇಂಡಿಯಾ ಅಂದ್ರೆ ವಿಶ್ವವೇ ನಿಮ್ಮ ಸಿನಿಮಾವನ್ನು ಮೆಚ್ಚುವುದು. ನಿಮ್ಮ ಭಾಷೆಯಲ್ಲಿ ಸಿನಿಮಾ ಮಾಡಿ, ಅದನ್ನು ಬೇರೆ ಭಾಷೆಯವರು ಮೆಚ್ಚಿ, ತಮ್ಮ ಭಾಷೆಗೂ ಡಬ್ ಮಾಡಬೇಕು. ಅದು ತನ್ನಿಂದ ತಾನೇ ಆಗುವ ಪ್ರಕ್ರಿಯೆಯಾಗಬೇಕು. ಆದರೆ ಇಂದಿನ ಹಲವು ನಿರ್ದೇಶಕರು, ಸಿನಿಮಾ ಶುರು ಮಾಡುವುದಕ್ಕೂ ಮುಂಚೆಯೇ ಪ್ಯಾನ್ ಇಂಡಿಯಾ ಸಿನಿಮಾ ಎಂದು, ಬೇರೆ ಬೇರೆ ಭಾಷೆಯ ಕಲಾವಿದರನ್ನು ಹಾಕಿ ಸಿನಿಮಾ ಮಾಡಿದರೆ ಅದು ಪ್ಯಾನ್ ಇಂಡಿಯಾ ಹೇಗೆ ಆಗತ್ತೆ ಅಂತಾ ಪ್ರಶ್ನಿಸಿದ್ದಾರೆ ಚಂದ್ರಶೇಖರ್ ಅವರು.

ಸಿನಿಮಾ ನಿರ್ದೇಶನ ಮಾೠುವಾಗ, ನಿಮ್ಮ ಮನಸ್ಸಿಲ್ಲಿ ಯಾವ ರೀತಿಯ ಕಥೆ ಇರುತ್ತದೆಯೋ, ಅದೇ ರೀತಿ ನಾವು ಸಿನಿಮಾ ನಿರ್ದೇಶನ ಮಾಡಬೇಕಾಗುತ್ತದೆ. ನೀವು ಕಥೆಯನ್ನು ಅರ್ಧ ಭಾಗ ಮಾತ್ರ ನಿಮ್ಮ ಮನಸ್ಸಿನಲ್ಲಿರುವಂತೆ ನಿರ್ದೇಶನ ಮಾಡಿದ್ದಲ್ಲಿ ಅಥವಾ ಅರ್ಧ ಭಾಗ ಮಾತ್ರ ಜನರಿಗೆ ಅರ್ಥವಾಗುವಂತೆ ಮಾಡಿದ್ದಲ್ಲಿ, ನಿಮ್ಮ ಸಿನಿಮಾ ಸಕ್ಸಸ್ ಕಾಣುವುದಿಲ್ಲ. ಇದು ತುಂಬಾ ಸರತಿ ಆಗುವ ಅಪಾಯ. ಆದ್ದರಿಂದ ಡಿಟೇಲ್ ಆಗಿ ವಿವರಗಳನ್ನು ಆರಿಸಿ, ಸ್ಕ್ರಿಪ್ಟ್ ಬರೆಯಬೇಕು ಅಂತಾರೆ ನಾಗತೀಹಳ್ಳಿ ಚಂದ್ರಶೇಖರ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss