www.karnatakatv.net : ಬೆಳಗಾವಿ: ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಮತ್ತು ಕೋರೊನಾ ಪಾಸಿಟಿವ್ ಸಂಖ್ಯೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಗಡಿಯಲ್ಲಿನ ಬಾಚಿ ಚೆಕ್ ಪೋಸ್ಟ ತೆರವುಗೊಳಿಸುವಂತೆ ಆಗ್ರಹಿಸಿ ಮಹಾರಾಷ್ಟ್ರದ ಶಿನ್ನೋಳಿ ಗ್ರಾಮಸ್ಥರು ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.
ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಎರಡು ರಾಜ್ಯಗಳ ಗಡಿಯಲ್ಲಿ ಕರ್ನಾಟಕ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ರಾಜ್ಯಕ್ಕೆ ಆಗಮಿಸುವವರಿಗೆ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ರಿಪೋರ್ಟ ಕಡ್ಡಾಯಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾಡಳಿತವು ಬೆಳಗಾವಿಯ ಎಲ್ಲಾ ಗಡಿಗಳಲ್ಲಿ ಸ್ವ್ಯಾಬ್ ಚೆಕ್ ಪೋಸ್ಟ್ ಅನ್ನು ಅಳವಡಿಸಲಾಗಿದ್ದು. ಗಡಿ ಒಳಗೆ ಆಗಮಿಸುವ ಸಾರ್ವಜನಿಕರಿಗೆ ಮತ್ತು ವಾಹನಗಳನ್ನ ತಾಪಸಣೆ ಮುಖಾಂತರ ಒಳಗಡೆ ಬಿಡಲಾಗುತ್ತಿದ್ದು.ಇದನ್ನ ಖಂಡಿಸಿ ಶಿನ್ನೋಳಿ ಗ್ರಾಮದಲ್ಲಿ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಲಾಗುತ್ತಿದೆ.
ಗಡಿ ಭಾಗ ಬೆಳಗಾವಿಯಲ್ಲಿ ಕಟ್ಟುನಿಟ್ಟಿನ ಆದೇಶದ ಮೇರೆಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿದ್ದರಿಂದ ದಿನನಿತ್ಯ ಓಡಾಡುವ ಕೂಲಿ ಕಾರ್ಮಿಕರು ಸೇರಿ ಇನ್ನಿತರ ಜನರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಹೀಗಾಗಿ ತಕ್ಷಣವೇ ಬಾಚಿ ಚೆಕ್ ಪೋಸ್ಟ ತೆರವುಗೊಳಿಸುವಂತೆ ಆಗ್ರಹಿಸಿ ಗುರುವಾರ ಮಹಾರಾಷ್ಟ್ರದ ಶಿನೊಳ್ಳಿ ಗ್ರಾಮಸ್ಥರು ರಸ್ತೆ ತಡೆ ನಡೆಸಲಿದ್ದಾರೆ.
ಬೆಳಗಾವಿಯ ಗಡಿಯಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಸರ್ಕಾರದ ಆದೇಶದ ಮೇರೆಗೆ ಇನ್ನು ಹೆಚ್ಚಿನ ಭದ್ರತೆ ಒದಗಿಸಿ ನೆಗಟಿವ ರಿಪೋರ್ಟ್ ಚೆಕ್ ಮಾಡಿ ಬಿಡಲಾಗುವುದು ಎಂದು ತಿಳಿದು ಬಂದಿದೆ.
ನಾಗೇಶ ಕುಂಬಳಿ ಕರ್ನಾಟಕ ಟಿವಿ ಬೆಳಗಾವಿ



