- Advertisement -
www.karnatakatv.net : ರಾಯಚೂರು : ರಾಯಚೂರು ನಗರದಲ್ಲಿಂದು ಕಲ್ಯಾಣ ಕರ್ನಾಟಕ ಭಾಗದ ಕೈ ನಾಯಕರ ಸಮಾವೇಶ ಏರ್ಪಡಿಸಲಾಗಿದೆ. ಸಮಾವೇಶ ಹಿನ್ನಲೆ, ನಗರಕ್ಕೆ ಕಾಂಗ್ರೆಸ್ ಉಸ್ತುವಾರಿ ಸರ್ಜೆವಾಲಾ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ , ಡಿಕೆ ಶಿವಕುಮಾರ್ ಸೇರಿದಂತೆ ಪ್ರಮುಖರು ಆಗಮಿಸಿರುವ ಹಿನ್ನಲೆ, ನಗರದ ಬಹುತೇಕ ರಸ್ತೆಗಳು ಜಾಮ್ ಆಗಿವೆ.
ಅದೇ ರೀತಿ ಸಮಾವೇಶ ನಡೆಯುವ ಹೋಟೆಲ್ ಇರುವ ಗಾಂಧೀ ಚೌಕ್ ರಸ್ತೆಯಲ್ಲಿ ಆಂಬ್ಯುಲೆನ್ಸ್ ವೊಂದಕ್ಕೆ ಪೊಲಿಸ್, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ದಾರಿ ಬಿಡದೇ ಸರಿಸುಮಾರು ೨೦ ನಿಮಿಷ ಸತಾಯಿಸಿದ ಘಟನೆ ನಡೆಯಿತು..
ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು
- Advertisement -