Thursday, November 21, 2024

Latest Posts

ದರೋಡೆ ಮಾಡಿದ ಆರೋಪಿಗಳ ಬಂಧನ…!

- Advertisement -

www.karnatakatv.net :ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ( ಎಂಸಿಡಿಸಿಸಿ ) ನಲ್ಲಿ ಕಳವು ಮಾಡಲು ಯತ್ನಿಸಿದ್ದ ಹಾಗೂ ಇತ್ತೀಚೆಗೆ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಂಪ್ಯೂಟರ್ ಮಾನಿಟರ್ ಮತ್ತಿತರ ವಸ್ತುಗಳನ್ನು ಕಳವು ಮಾಡಿದ್ದ ನಾಲ್ವರು ಆರೋಪಿಗಳನ್ನು ಡಿವೈಎಸ್ಪಿ ನೇತೃತ್ವದ ತಂಡ ಬಂಧಿಸಿದೆ .

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್ . ಸುಂದರ ರಾಜ್ ಮಾತನಾಡಿ, ಬಂಧಿತರು ಪಟ್ಟಣದ ಬೆಂಗಳೂರು ಮಾರ್ಗದ ರಸ್ತೆಯಲ್ಲಿ  ಶುಕ್ರವಾರ ರಾತ್ರಿ ದರೋಡೆ ಮಾಡುವ ಉದ್ದೇಶದಿಂದ   ಹೊಂಚು ಹಾಕುತ್ತಿದ್ದರು . ಖಚಿತ ಮಾಹಿತಿ ಆಧರಿಸಿದ ಡಿವೈಎಸ್ಪಿ ಜಿ.ನಾಗರಾಜ್ ನೇತೃತ್ವದ ತಂಡ ದಿಢೀರ್ ಕಾರ್ಯಾಚರಣೆ  ನಡೆಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿತು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್ . ಸುಂದರ ರಾಜ್ ಮಾತನಾಡಿ, ಬಂಧಿತರು ಪಟ್ಟಣದ ಬೆಂಗಳೂರು ಮಾರ್ಗದ ರಸ್ತೆಯಲ್ಲಿ  ಶುಕ್ರವಾರ ರಾತ್ರಿ ದರೋಡೆ ಮಾಡುವ ಉದ್ದೇಶದಿಂದ   ಹೊಂಚು ಹಾಕುತ್ತಿದ್ದರು . ಖಚಿತ ಮಾಹಿತಿ ಆಧರಿಸಿದ ಡಿವೈಎಸ್ಪಿ ಚಾಕು ಜಿ.ನಾಗರಾಜ್ ನೇತೃತ್ವದ ತಂಡ ದಿಢೀರ್ ಕಾರ್ಯಾಚರಣೆ  ನಡೆಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿತು .

ಜು .14 ರಂದು ಮುಂಜಾನೆ ಪಟ್ಟಣದ ಎಂಸಿಡಿಸಿಸಿ ಬ್ಯಾಂಕ್ ಕಿಟಕಿ ಮುರಿದು ಒಳ ನುಗ್ಗಿ ಕಳವಿಗೆ ಯತ್ನಿಸಲಾಗಿತ್ತು . 10 ದಿನಗಳ ಹಿಂದೆ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದ ಎಸ್‌ಬಿಐ ಬಾಗಿಲು ಮುರಿದು ಹಣ ಕಳವಿಗೆ ಯತ್ನಿಸಲಾಗಿತ್ತು . ಹಣ ಸಿಗದಿದ್ದಾಗ ಕಂಪ್ಯೂಟರ್‌ನ ಮಾನಿಟರ್‌, ಸಿಸಿ ಟಿವಿಯ ಡಿವಿಆರ್, ಆಂಪ್ಲಿಫೈರ್‌ ಗಳನ್ನು ಕಳವು ಮಾಡಿದ್ದೇವೆ ಎಂದು ಒಪ್ಪಿಕೊಂಡರು. ಕೃತ್ಯಕ್ಕೆ ಬಳಸಿದ್ದ 2 ಬೈಕ್, ದೊಣ್ಣೆಗಳು, ಕಬ್ಬಿಣದ ರಾಡು, 1 ಟಾರ್ಚ್, 1 ಚಾಕುವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ

- Advertisement -

Latest Posts

Don't Miss