Friday, November 28, 2025

Latest Posts

ರಾ..ರಾ..ರಾ..’ರಾಬರ್ಟ್’ ಸ್ವಾಗತಕ್ಕೆ ಭರ್ಜರಿ ಪ್ರಿಪರೇಷನ್….ಥಿಯೇಟರ್ ಮುಂದೆ ರಾರಾಜಿಸುತ್ತಿವೆ ದಾಸ ದರ್ಶನ್ ಕಟೌಟ್…!

- Advertisement -

ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ರಾಬರ್ಟ್ ಸಿನಿಮಾ ತೆರೆಮೇಲೆ ಅಬ್ಬರಿಸೋದಿಕ್ಕೆ ದಿನಗಣನೆ ಮಾತ್ರ ಬಾಕಿಯಿದೆ. ಈಗಾಗ್ಲೇ ರಾಬರ್ಟ್ ಸ್ವಾಗತಕ್ಕೆ ಥಿಯೇಟರ್ ಅಂಗಳದಲ್ಲಿ ಭರ್ಜರಿ ಪ್ರಿಪರೇಷನ್ ನಡೆಯುತ್ತಿದೆ.

ಮಾರ್ಚ್ 11ಕ್ಕೆ ಬೆಳ್ಳಿಪರದೆಯ ಮೇಲೆ ಧಗಧಗಿಸುವ ದಾಸ ದರ್ಶನ್ ರಾಬರ್ಟ್ ಸಿನಿಮಾವನ್ನು ಭರ್ಜರಿಯಾಗಿ ಸ್ವಾಗತಿಸಲು ಥಿಯೇಟರ್ ಮುಂದೆ ದೊಡ್ಡ ಕಟೌಟ್ ಹಾಕಲಾಗಿದೆ.

ಎಂಜಿ ರಸ್ತೆಯ ಶಂಕರ್ ನಾಗ್ ಥಿಯೇಟರ್ ನಲ್ಲಿ ರಾಬರ್ಟ್ ಕಟೌಟ್ ನಿಲ್ಲಿಸಲಾಗಿದ್ದು, ಅಭಿಮಾನಿಗಳು ಕಟೌಟ್ ಗೆ ಹಾರ ಹಾಕಿ, ಹಾಲಿನ ಅಭಿಷೇಕ ಮಾಡಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಇದೇ ಮೊದಲ ಬಾರಿಗೆ ಎಂಜಿ ರಸ್ತೆಯಲ್ಲಿ ಕನ್ನಡ ಸಿನಿಮಾದ ಕಟೌಟ್ ಹಾಕಲಾಗಿದೆ.

- Advertisement -

Latest Posts

Don't Miss