www.karnatakatv.net : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ರಾಬರ್ಟ್.. ಇಷ್ಟೊತ್ತಿಗಾಗ್ಲೇ ಈ ಸಿನಿಮಾ ತೆರೆಕಾಣ್ಬೇಕಿತ್ತು.. ಆದ್ರೆ ಇನ್ನೇನು ಸಿನಿಮಾ ರಿಲೀಸ್ ಆಗ್ಬೇಕು ಅನ್ನುವ ಸಮಯದಲ್ಲಿ ಲಾಕ್ ಡೌನ್ ಆದ ಕಾರಣ ಥಿಯೇಟರ್ ಗಳು ಬಂದ್ ಆಗ್ಬಿಟ್ವು.. ಹಾಗಾಗಿ ಸಿನಿಮಾ ರಿಲೀಸ್ ಆಗಲು ಸಾಧ್ಯವಾಗ್ಲಿಲ್ಲ.. ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗ್ತಿರೋದ್ರಿಂದ ಇನ್ನೂ ಮೂರ್ನಾಲ್ಕು ತಿಂಗಳು ಚಿತ್ರಮಂದಿರಗಳು ಓಪನ್ ಆಗುವಂತೆ ಕಾಣ್ತಿಲ್ಲ.. ಸೋ ಸಿನಿಮಾ ನೋಡಲು ಸಿನಿಪ್ರಿಯರು ಇನ್ನಷ್ಟು ದಿನಗಳು ಕಾಯ್ಲೇಬೇಕಾಗಿದೆ.. ರಾಬರ್ಟ್ ಸಿನಿಮಾ ಬಿಡುಗಡೆ ತಡವಾಗ್ತಿರೋದಕ್ಕೆ ಸಿನಿಪ್ರಿಯರು ಹೆಚ್ಚು ಬೇಸರ ವ್ಯಕ್ತಪಡಿಸ್ತಿದ್ದಾರೆ.. ಬೇಸರದಲ್ಲಿರುವ ಅಭಿಮಾನಿಗಳಿಗೆ ಇದೀಗ ರಾಬರ್ಟ್ ಚಿತ್ರತಂಡ ಸ್ಪೆಷಲ್ ಗಿಫ್ಟ್ ಕೊಡೋಕೆ ರೆಡಿಯಾಗಿದೆ..

ಹೌದು, ರಾಬರ್ಟ್ ಸಿನಿಮಾ ರಿಲೀಸ್ ಆಗುವುದು ತಡವಾಗ್ತಿರೋದ್ರಿಂದ ಅಭಿಮಾನಿಗಳ ಬೇಸರ ಕೊಂಚ ದೂರ ಮಾಡಿ, ಚಿತ್ರದ ಬಗ್ಗೆ ಮತ್ತಷ್ಟು ಆಸಕ್ತಿ ಮೂಡಿಸುವ ಸಲುವಾಗಿ ಚಿತ್ರತಂಡ ಈ ಸಿನಿಮಾದ ಮತ್ತೊಂದು ಟೀಸರ್ ನ್ನ ರಿವೀಲ್ ಮಾಡಲು ಪ್ಲಾನ್ ಮಾಡಿಕೊಳ್ತಿದೆ.. ಈಗಾಗ್ಲೇ ರಾಬರ್ಟ್ ಚಿತ್ರದ ಒಂದು ಟೀಸರ್ ಹೊರಬಂದಿದ್ದು ಸಿನಿಪ್ರಿಯರ ಗಮನ ಸೆಳೆದಿದೆ.. ಚಿತ್ರದಲ್ಲಿನ ಹಾಡಂತೂ ಪ್ರೇಕ್ಷಕರನ್ನ ಬಹಳ ಇಂಪ್ರೆಸ್ ಮಾಡಿದೆ.. ಅದೇ ರೀತಿ ಚಿತ್ರದ ಸಣ್ಣ ಝಲಕ್ ಹಾಗೂ ಮತ್ತೊಂದು ಬ್ಯೂಟಿಫುಲ್ ಸಾಂಗ್ ಇರುವ ಇನ್ನೊಂದು ಟೀಸರ್ ನ್ನ ಹೊರತರಲು ಚಿತ್ರತಂಡ ರೆಡಿಯಾಗಿದೆ..
ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ರಾಬರ್ಟ್ ಸಿನಿಮಾ ಮೂಡಿಬರ್ತಿದ್ದು, ದರ್ಶನ್ ಅವರ ವಿವಿಧ ಲುಕ್ ಗಳಿರುವ ಚಿತ್ರದ ಪೋಸ್ಟರ್ಸ್ ಹಾಗೂ ಟೀಸರ್ ಈಗಾಗ್ಲೇ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ.. ಇನ್ನೂ ಈ ಚಿತ್ರದಲ್ಲಿ ನಟ ದರ್ಶನ್ ಅವರ ರೋಲ್ ಹೇಗಿರ್ಬಹುದು ಅನ್ನೋ ಕುತೂಹಲ ಸಹಜವಾಗಿಯೇ ಸಿನಿ ಅಭಿಮಾನಿಗಳನ್ನ ಕಾಡ್ತಿದೆ..
ಅಂದಹಾಗೆ ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಗೌಡ ಅವರು ಬಂಡವಾಳ ಹೂಡಿದ್ದಾರೆ.. ಅರ್ಜುನ್ ಜನ್ಯಾ ಅವರ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿಬರ್ತಿವೆ.. ಈಗಾಗ್ಲೇ ಚಿತ್ರದ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದೆ.. ಮೇ ತಿಂಗಳಲ್ಲೇ ಸಿನಿಮಾ ಕೂಡ ತೆರೆ ಕಾಣ್ಬೇಕಿತ್ತು.. ಆದ್ರೆ ಕೊರೋನಾ ಹಾವಳಿ ಶುರುವಾಗಿದ್ರಿಂದ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ.. ಮುಂದಿನ ತಿಂಗಳು ರಾಬರ್ಟ್ ಚಿತ್ರದ ಇನ್ನೊಂದು ಟೀಸರ್ ನ್ನ ರಿವೀಲ್ ಮಾಡುವುದಾಗಿ ಸದ್ಯ ಚಿತ್ರತಂಡ ತಿಳಿಸಿದೆ.. ಈ ವಿಷ್ಯ ಕೇಳಿ ಇದೀಗ ದಚ್ಚು ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.. ಚಿತ್ರಮಂದಿರಗಳು ಪುನರ್ ಆರಂಭಗೊಂಡ ನಂತ್ರ ರಾಬರ್ಟ್ ಸಿನಿಮಾ ರಿಲೀಸ್ ಆಗಲಿದೆ..
ಚಂದನ, ಸಿನಿಮಾ ಬ್ಯುರೋ, ಕರ್ನಾಟಕ ಟಿವಿ