ರಾಕಿಂಗ್ ಸ್ಟಾರ್ ಯಶ್ ಅವರು ಫ್ರೀಯಾಗಿ ಬಂದು ಅತಿಥಿ ಪಾತ್ರ ನಿರ್ವಹಿಸಿದ್ರು: ರೂಪಾ ಅಯ್ಯರ್

Sandalwood: ನಿರ್ದೇಶಕಿಯಾಗಿರುವ ರೂಪಾ ಅಯ್ಯರ್ ಅವರು ಚಂದ್ರ ಅನ್ನೋ ಸಿನಿಮಾ ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್, ತ್ರಿಶಾ, ವಿವೇಕ್ ಸೇರಿ ಹಲವು ಪ್ರಸಿದ್ಧ ತಾರೆಯರು ಅಭಿನಯಿಸಿದ್ದರು. ಈ ಸಿನಿಮಾದಿಂದ ರೂಪಾ ಅಯ್ಯರ್ ಅವರಿಗೆ ಉತ್ತಮ ಲಾಭ ಬಂದಿತ್ತು.

ಆದರೆ ಈ ಸಿನಿಮಾ ವಿಶೇಷ ಅಂದ್ರೆ, ರೂಪಾ ಮೇಡಂ ಅವರು ಸಿನಿಮಾ ನಿರ್ದೇಶಿಸುತ್ತಿದ್ದಾರೆಂಬ ಗೌರವದಿಂದ ರಾಕಿಂಗ್ ಸ್ಟಾರ್ ಯಶ್ ಅವರು ಫ್ರೀಯಾಗಿ ಬಂದು ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಿದ್ದರು.

ಇದಾದ ಬಳಿಕ ರೂಪಾ ಮದುವೆಯಾದರು. ಬಳಿಕ ಕಲರ್ಸ್ ಅನ್ನೋ ಸಿನಿಮಾ ಮಾಡಿದರು. ನಂತರ ಬೇರೆ ಬೇರೆ ಕ್ಷೇತ್ರಗಳಲ್ಲಿ ಬ್ಯುಸಿಯಾಗಿದ್ದ ರೂಪಾ, ಸಿನಿಮಾ ಮಾಡುವ ಮನಸ್ಸು ಮಾಡಲಿಲ್ಲ. ಹಲವು ವರ್ಷಗಳ ಕಾಲ ಸಿನಿ ರಂಗದಿಂದ ಸ್ವಲ್ಪ ದೂರವೇ ಉಳಿದಿದ್ದರು.

ಇದೀಗ ಆಜಾದ್ ಭಾರತ್ ಅನ್ನೋ ಸಿನಿಮಾವನ್ನು ರೂಪಾ ಅಯ್ಯರ್ ನಿರ್ದೇಶಿಸುತ್ತಿದ್ದಾರೆ. ಹಿಂದಿ ಸಿನಿಮಾವಾದ ಇದರಲ್ಲಿ ದಿಗ್ಗಜರ ದಂಡೇ ಇದೆ. ಈ ಬಗ್ಗೆ ಮಾತನಾಡಿರುವ ರೂಪಾ ಅಯ್ಯರ್, ನೇತಾಜಿ ನನ್ನ ನೆಚ್ಚಿನ ನಾಯಕ ಹಾಗಾಗಿ ಈ ಸಿನಿಮಾದಲ್ಲಿ ಅವರ ಕಥೆಯೇ ಹೇಳಲಿದ್ದೇನೆ ಎಂದಿದ್ದಾರೆ.

ಇನ್ನು ರೂಪಾ ಅಯ್ಯರ್ ಅವರಿಗೆ ಯಾರಾದ್ರೂ ಯಾಮಾರಿಸಿದ್ರಾ ಅಂತಾ ಕೇಳಿದ ಪ್ರಶ್ನೆಗೆ ರೂಪಾ ಅವರು ಕುತೂಹಲಕಾರಿಯಾಗಿ ಉತ್ತರಿಸಿದ್ದಾರೆ. ಅದೇನು ಅಂತಾ ಸಂದರ್ಶನದಲ್ಲಿ ನೋಡಿ.

About The Author