Saturday, July 27, 2024

Latest Posts

ಅಭಿಮಾನಿಗಳ ಪ್ರೀತಿಗೆ 2 ಗಂಟೆ ಸೆಲ್ಫಿ ಕೊಟ್ಟ ರಾಕಿ ಭಾಯ್

- Advertisement -

ಅಭಿಮಾನಿಗಳ ಪ್ರೀತಿಗೆ 2 ಗಂಟೆ ಸೆಲ್ಫಿ ಕೊಟ್ಟ ರಾಕಿ ಭಾಯ್

ನೂರಾರು ರಾಕಿಂಗ್ ಅಭಿಮಾನಿಗಳಿಗೆ ನೆಚ್ಚಿನ ನಟನ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳುವ ಸುವರ್ಣಾವಕಾಶ ಸಿಕ್ಕಿತ್ತು. ಯಶ್ ಜೊತೆ ಫೋಟೊಗೆ ಪೋಸ್ ಕೊಡುವ ಅವಕಾಶ ಸಿಕ್ಕಿತ್ತು ಎನ್ನುವುದಕ್ಕಿಂತ ಸ್ವತಃ ಯಶ್ ಕೊಟ್ಟರು ಎನ್ನುವುದು ವಿಶೇಷ. ಅಂಬೇಡ್ಕರ್ ಭವನದಲ್ಲಿ ನಡೆದ ಫಿಲ್ಮ್ ಕಂಪಾನಿಯನ್‌ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಯಶ್ ಭಾಗಿ ಆಗಿದ್ದರು. ಕಾರ್ಯಕ್ರಮ ಮುಗಿದ ನಂತರ ಅಲ್ಲಿ ನೆರೆದಿದ್ದ ಅಭಿಮಾನಿಗಳ ಜೊತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಬಹಳ ದಿನಗಳ ನಂತರ ನೇರವಾಗಿ ಅಭಿಮಾನಿಗಳಿಗೆ ದರ್ಶನ್ ಕೊಟ್ಟಿದ್ದರುಯಶ್ “ನಮ್ಮ ಹುಡುಗರು ಅಲ್ಲವಾ” ಎಂದು ಹೇಳಿ ಪ್ರತಿಯೊಬ್ಬರ ಜೊತೆ ಫೋಟೊ ತೆಗೆಸಿಕೊಳ್ಳುವುದಾಗಿ ಹೇಳಿದ್ದಾರೆ. ಇದನ್ನು ಕೇಳಿ ಆಯೋಜಕರೇ ಶಾಕ್ ಆಗಿದ್ದರು.

500 ಜನ ಅಭಿಮಾನಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ನಟ ಯಶ್, ಒಂದೂವರೆ ಗಂಟೆ ನಿಂತೇ ಎಲ್ಲರಿಗೂ ಫೋಟೊ ಕೊಟ್ಟು ಖುಷಿಪಡಿಸಿದರು.

- Advertisement -

Latest Posts

Don't Miss