ಪಪ್ಪಾಯ ಹಣ್ಣುನ್ನು ಯಾರು ಬೇಕಾದರೂ ತಿನ್ನಬಹುದು. ತಿಂದವರಿಗೆಲ್ಲ ಒಂದೊಂದು ರೀತಿಯ ಪ್ರಯೋಜನಗಳು ಸಿಗುತ್ತವೆ. ಪಪ್ಪಾಯ ಹಣ್ಣಿನ ಸೇವನೆಯಿಂದ ಉಂಟಾಗುವ ಆರೋಗ್ಯದ ಲಾಭಗಳು ಒಂದೆರಡಲ್ಲ. ಮಹಿಳೆಯರಿಗೂ ಕೂಡ ಪಪ್ಪಾಯ ಹಣ್ಣಿನಿಂದ ಸಾಕಷ್ಟು ಪ್ರಯೋಜನಗಳಿವೆ. ಅದೇ ರೀತಿ ಪಪ್ಪಾಯ ಕಾಯಿ ಕೂಡ ಆರೋಗ್ಯಕ್ಕೆ ಅಷ್ಟೇ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಗರ್ಭಿಣಿಯರು ಯಾವುದೇ ಕಾರಣಕ್ಕೂ ಪಪ್ಪಾಯ ಕಾಯಿ ಅಥವಾ ಅದರ ಪದಾರ್ಥಗಳನ್ನು ಸೇವಿಸಬಾರದು. ಇದು ಗರ್ಭಪಾತಕ್ಕೆ ಕಾರಣವಾಗುತ್ತದೆ. ಉಳಿದಂತೆ ಪಪ್ಪಾಯ ಕಾಯಿಯನ್ನು ಯಾರು ಬೇಕಾದರೂ ಸೇವಿಸಬಹುದು.
ಪಪ್ಪಾಯ ಕಾಯಿಯಲ್ಲಿ ಪೊಟ್ಯಾಸಿಯಮ್, ಫೈಬರ್, ಮೆಗ್ನೀಸಿಯಮ್ ಮತ್ತು ಕನಿಷ್ಠ ಕ್ಯಾಲೋರಿಗಳ ಜೊತೆಗೆ ವಿಟಮಿನ್ ಸಿ, ಬಿ ಮತ್ತು ಇ ನಂತಹ ಪ್ರಮುಖ ಪೋಷಕಾಂಶಗಳು ಇವೆ. ಅದಷ್ಟೇ ಅಲ್ಲದೆ ಇದು ಹೊಸ ಜೀವಕೋಶಗಳ ಅಭಿವೃದ್ಧಿಗೆ, ಚರ್ಮದ ಸಮಸ್ಯೆಗಳು ಹಾಗೂ ಗಂಟುಗಳ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೂ ಹಸಿರು ಪಪ್ಪಾಯ ಸಾರಗಳು ಚರ್ಮದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಚರ್ಮದ ಮೇಲೆ ಆಗಿರುವ ಗಾಯವನ್ನು ಬೇಗನೆ ಗುಣಪಡಿಸಲು ಸಹಾಯ ಮಾಡುತ್ತದೆ. ಹಾಗೂ ಗಾಯಕ್ಕೆ ಸೋಂಕು ತಗುಲುವುದನ್ನು ತಡೆಯುತ್ತದೆ.
ಈಗಿನ ಜನರೇಶನ್ ನವರಲ್ಲಿ ಕೊಲೆಸ್ಟ್ರಾಲ್ ಅಂಶ ಜನರ ಆರೋಗ್ಯಕ್ಕೆ ಒಂದು ಶಾಪ ಎಂದು ಹೇಳಿದರೆ ತಪ್ಪಾಗದು. ಏಕೆಂದರೆ ಸೇವನೆ ಮಾಡುವ ಹಲವಾರು ಆಹಾರ ಪದಾರ್ಥಗಳಲ್ಲಿ ಎಣ್ಣೆಯ ಜಡ್ಡಿನಾಂಶ ಸೇರಿರುತ್ತದೆ. ಹಾಗಾಗಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿರುತ್ತದೆ. ಆದ್ದರಿಂದ ಪಪ್ಪಾಯ ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕಡಿಮೆ ಮಾಡಿ ದೇಹದ ತೂಕವನ್ನು ಇಳಿಕೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಹಾಗಾಗಿ ವಾರಕ್ಕೆ ಒಂದು ಬಾರಿಯಾದರು ಪಪ್ಪಾಯ ಕಾಯಿಯನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಹಾಗೂ ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ