Hassan News: ಹಾಸನ :ಸಕಲೇಶಪುರ: ಪಶ್ಚಿಮ ಘಟ್ಟದ ಸೌಂದರ್ಯ ಸವಿಯಲು ಬಂದ ಪ್ರವಾಸಿಗರ ಮೇಲೆ ಹಲ್ಲೆ ನಡಿಸಿದ ತಿಳಿಗೇಡಿಗಳ ಕ್ರೌರ್ಯತನಕ್ಕೆ ತಾಲೂಕಿನ ಸಾರ್ವಜನಿಕರು ಅಸಮಾದಾನ ವ್ಯಕ್ತಪಡಿಸಿದ್ದಾರೆ.
ಸಕಲೇಶಪುರದಿಂದ ಸುಮಾರು 43 ಕಿಲೋ ಮೀಟರ್ ಹಾಗೂ ಬಿಸಲೆಗೆ 6 ಕಿಲೋ ಮೀಟರ್ ಇರುವ ಪಟ್ಲ ಬೆಟ್ಟಕ್ಕೆ ದಿನಕ್ಕೆ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇದ್ದನ್ನೆ ಬಂಡವಾಳವಾಗಿಸಿಕೊಂಡ ಕೆಲವರು ತಮ್ಮದೇ ಪಿಕ್ಆಪ್ ವಾಹನಗಳನ್ನು ಇಟ್ಟಿಕೊಂಡು ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ ಪ್ರವಾಸಿಗರಲ್ಲಿ ಹಣವನ್ನು ಪೀಕುತ್ತಿದ್ದರು.
ನಿನ್ನೆ ಬಂದಿದ್ದ ಮಂಗಳೂರಿನ ಪ್ರವಾಸಿಗರಲ್ಲಿ ಸ್ಥಳಿಯ ವಾಹನ ಚಾಲಕರು ಬಂದಂತಹ ಪ್ರವಾಸಿಗರಲ್ಲಿ
ಪ್ರವಾಸಿಗರ ಸ್ವಂತ ವಾಹನವಿದ್ದರೂ, ಪಟ್ಲಬೆಟ್ಟಕ್ಕೆ ಹೋಗಲು ಅವಕಾಶ ನೀಡದೇ ತಮ್ಮ ವಾಹನದಲ್ಲೇ ಹಾಗೂ ಸ್ಥಳಿಯರ ವಾಹನದಲ್ಲೇ ಹೋಗಬೇಕು ಎಂದು ತಾಕೀತು ಮಾಡಿದ್ದಾರೆ.
ಬರುವ ಪ್ರವಾಸಿಗರಿಗೆ 1000 ರೂ ಗಳಿಂದ ಹಿಡಿದು 1500 ರೂಗಳಷ್ಟು ನಿಗದಿ ಮಾಡಿ ಹಣವನ್ನು ವಸೂಲಿ ಮಾಡುತ್ತಿದ್ದು ಇವರೇ ಸರ್ಕಾರದ ಕಿಂಗ್ಪಿನ್ ಗಳಂತೆ ವರ್ತನೆ ಮಾಡುತ್ತಿದ್ದು ಇದನ್ನು ಕೇಳುವವರಿಲ್ಲದೆ ಇಲ್ಲಿನ ವಾಹನ ಚಾಲಕರೆ ಸುಪ್ರೀಂ ಆಗಿದ್ದಾರೆ.
ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪ್ರವಾಸಿಗರ ಮೇಲೆ ಕೈ ಮಾಡುವುದರ ಮಟ್ಟಿಗೆ ಇಲ್ಲಿನ ವಾಹನ ಸವಾರರು ಅಟ್ಟಹಾಸ ಮೆರೆದಿದ್ದಾರೆ. ಎರಡೂ ಗುಂಪಿನವರೆಗೂ ಜಗಳವಾಡುವುದರ ಮೂಲಕ ಪ್ರಕರಣ ಕುಕ್ಕೆಸುಬ್ರಮಣ್ಯ ಪೋಲೀಸ್ ಠಾಣೆ ಮೆಟ್ಟಿಲೇರಿದೆ.
ಇಂತಹ ಸ್ಥಳಿಯ ವಾಹನ ಚಾಲಕರಿಗೆ ಅರಣ್ಯ ಇಲಾಕೆಯವರು ಕಠಿಣ ಕ್ರಮ ಕೈ ಗೊಳ್ಳಬೇಕೆಂದು ಸಕಲೇಶಪುರ ಸಾರ್ವಜನಿಕರು ಆಗ್ರಹಿಸಿದ್ದಾರೆ.
Political Special: ಮೋದಿ ಬ್ರ್ಯಾಂಡ್‌ಗೆ ಏಟು ಬಿದ್ದಿದೆ: ಚೇತನ್ ಅಹಿಂಸಾ ವಿಶೇಷ ಸಂದರ್ಶನ
ಕರ್ನಾಟಕಕ್ಕೆ ಕಾಂಗ್ರೆಸ್ ಕೂಡ ಶತ್ರೂ, ಬಿಜೆಪಿ ಕೂಡ ಶತ್ರು: ಚೇತನ್ ಅಹಿಂಸಾ ವಿಶೇಷ ಸಂದರ್ಶನ
ಮದುವೆಯಾಗಿ ಒಂದೇ ತಿಂಗಳಲ್ಲಿ ಕೋಟಿ ಕೋಟಿ ಸಾಲದಲ್ಲಿ ಮುಳುಗಿದ ನಟಿಯ ಗಂಡ: ಆಸ್ತಿ ಮಾರಾಟ