ಮಂಡ್ಯ : ನಾಳೆ ನಡೆಯಲಿರುವಂತ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಹಣದ ಹೊಳೆಯನ್ನೇ ಹರಿಸಲಾಗಿದೆ. ಪ್ರತಿ ವೋಟ್ ಗೆ ಮತದಾರರಿಗೆ 2 ಸಾವಿರ ರೂ ಹಂಚಿಕೆಯನ್ನು ಮಾಡಲಾಗುತ್ತಿದೆ.
ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಪದವೀಧರ ಮತದಾರರಿಗೆ 2,000 ರೂ ಹಣವನ್ನು ಕವರ್ನಲ್ಲಿ ಇರಿಸಿ ಮತದಾರರಿಗೆ ಹಂಚಿಕೆ ಮಾಡಲಾಗಿದೆ. ಈ ದೃಶ್ಯ ವೈರಲ್ ಆಗಿದೆ.
ದಕ್ಷಿಣ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎನ್.ಎಸ್.ವಿನಯ್ ಕವರ್ನಲ್ಲಿ 2 ಸಾವಿರ ಹಣ, ಉಪ್ಪು, ದೇವರ ಫೋಟೋ ಇಟ್ಟು ಹಂಚಿತ್ತಿದ್ದಾರೆ ಎಂಬುದಾಗಿ ಹಣ ಪಡೆದ ಮತದಾರರೊಬ್ಬರು ವಿಡಿಯೋ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.



