www.karnatakatv.net: ಹುಬ್ಬಳ್ಳಿ: ಸಹೋದರ ಸಹೋದರಿಯರಿಯರ ಬಾಂಧವ್ಯದ ಪ್ರತೀಕವಾಗಿ ದೇಶಾದ್ಯಂತ ಸಹೋದರಿಯರು ಸಹೋದರರಿಗೆ ರಾಖಿ ಕಟ್ಟೊದು ವಾಡಿಕೆ, ಈ ಮೂಲಕ ತನ್ನ ಸಹೋದರನ ಶ್ರೆಯಸ್ಸು ಬಯಸೊ ಪ್ರತಿ ಸಹೋದರಿಯು ಅಂತು ತನ್ನ ಅಣ್ಣ ತಮ್ಮಂದರಿಗೆ ತಪ್ಪದೇ ರಾಖಿ ಕಟ್ಟುತ್ತಾರೆ. ಇಂತದ್ರಲ್ಲಿ ಹುಬ್ಬಳ್ಳಿ ಯಲ್ಲಿ ರಕ್ಷಾ ಬಂಧನದ ಮಾರನೇ ದಿನ ವೃಕ್ಷಗಳಿಗೆ ರಾಖಿ ಕಟ್ಟಿ ವೃಕ್ಷಾ ಬಂಧನ ಆಚರಿಸಿ ಪರಿಸರ ಪ್ರೇಮ ಮೆರೆದಿದ್ದಾರ.
ಹೌದು ಹುಬ್ಬಳ್ಳಿಯ ಅಮರಗೋಳದ ಕುಬೇರ ಗೌಡ್ರು ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಕ್ಷಾ ಬಂಧನ ದಿನದಂದು ನೂರಾರು ಗಿಡಗಳನ್ನ ನೆಟ್ಟು ಅವುಗಳಿಗೆ ರಾಖಿ ಕಟ್ಟಿದ್ರು. ಈ ಮೂಲಕ ಗಿಡ ಮರಗಳು ಕೂಡಾ ತಮ್ಮ ವಡಹುಟ್ಟಿದವರಂತೆಯೇ ಸುರಕ್ಷಿತವಾಗಿರಲಿ ಅಂತ ಪರಿಸರ ಪ್ರೇಮ ಸಾರಿದ್ರು, ಅಷ್ಟೇ ಅಲ್ಲದೆ ಇದೇ ವೇಳೆ ಟ್ರಸ್ಟ್ ವತಿಯಿಂದ ಸಸಿಗಳನ್ನ ವಿತರಿಸಿದ್ರು.
ಕಾರ್ಯಕ್ರಮದಲ್ಲಿ ರೇಖಾ ಹೊಸೂರ್, ಮಾಲಾ ಗಡದ, ರವಿ ದಾಸನೂರು, ಷಣ್ಮುಖ ಬೆಟಿಗೇರಿ, ಫೈರೋಜ್ ಮಹಾಂತೇಶ್, ಮಂಜು, ಉಮೇಶ್ ದೊಡ್ಮನಿ, ಗಿರೀಶ್ ಪಾಟೀಲ್ ಮುಂತಾದವರು ಭಾಗವಹಿಸಿದ್ದರು.
ಕರ್ನಾಟಕ ಟಿವಿ- ಹುಬ್ಬಳ್ಳಿ