ನವೆಂಬರ್ 14ರ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗಲಿದೆ ಎಂಬ ವದಂತಿಗಳು ಹೆಚ್ಚಾಗ್ತಿದೆ. ಇದೇ ವಿಚಾರವಾಗಿ ತುಮಕೂರಿನಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಪ್ರತಿಕ್ರಿಯಿಸಿದ್ದಾರೆ. ರಾಜಕಾರಣ ನಿಂತ ನೀರಲ್ಲ. ಯಾವಾಗಲೂ ಚಲನಾಶೀಲತೆಯಿಂದ ಕೂಡಿರುತ್ತದೆ. ಬದಲಾವಣೆ ಆಗೋದಿಲ್ಲ ಅಂತಿಲ್ಲ. ಆದ್ರೆ ನಮ್ಮ ರಾಜ್ಯದಲ್ಲಿ ಬದಲಾವಣೆಗಳು ಸಾಧ್ಯತೆ ಇಲ್ಲ ಎಂದು, ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದ್ರು.
ನಾನು ಹೈಕಮಾಂಡ್ ಮುಖಂಡರಿಗೆ ಪತ್ರ ಬರೆದಿದ್ದೀನಿ. ಇವತ್ತು, ನಾಳೆಯೂ ಪತ್ರ ಬರೀತೀನಿ. ಅವಕಾಶ ಕೇಳಿ ಪತ್ರ ಬರೆಯುತ್ತಿದ್ದೇನೆ. ಅವರು ಬಿಹಾರ್ ಎಲೆಕ್ಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಅವಕಾಶ ಕೊಟ್ಟಿಲ್ಲ. ಅವರು ಸಮಯ ಕೊಟ್ಟು ನಾಳೆ ಬನ್ನಿ ಅಂದ್ರೆ ನಾಳೆನೇ ಹೋಗ್ತೀನಿ. ಯಾವಾಗ ಸಮಯ ಕೊಡ್ತಾರೋ ಆಗಲೇ ದೆಹಲಿಗೆ ಹೋಗ್ತೀನಿ. ನಾನು ಹಿಂದೆ ನಡೆದ ಘಟನೆ ಬಗ್ಗೆ ಸಂಪೂರ್ಣವಾದ ವಿವರವುಳ್ಳ ಪತ್ರವನ್ನು ಕಳಿಸಿದ್ದೇನೆ. ಮೇಲ್ ಮೂಲಕ ಮತ್ತು ಹಾರ್ಡ್ ಕಾಪಿಯನ್ನೂ ಕಳಿಸಿದ್ದೇನೆ.
ನಾನು ಕೇಳಿರೋದು ಯಾವುದೇ ಮಂತ್ರಿ ಕೆಲಸ ಕೊಡಿ ಅಂತ ಅಲ್ಲ. ಕೇಂದ್ರದಲ್ಲಿ ಏನೋ ಒಂದು ತಪ್ಪು ಅಭಿಪ್ರಾಯ ಮೂಡಿದೆ. ಅದನ್ನ ಕ್ಲಿಯರ್ ಮಾಡ್ಲಿಕ್ಕೆ ಒಂದ್ ಸಮಯ ಕೇಳಿದ್ದೇನೆ. ಈ ಹಿಂದಿನ ಪತ್ರವನ್ನು ನೋಡಿದ್ದಾರೋ ಇಲ್ವೋ ಗೊತ್ತಿಲ್ಲ. ಆದ್ರೆ, ಅವರ ಕಡೆಯಿಂದ ಯಾವುದೇ ರೆಸ್ಪಾನ್ಸ್ ಬಂದಿಲ್ಲ. ಅವರು ಬಿಹಾರ್ ಎಲೆಕ್ಷನ್‌ನಲ್ಲಿ ಬ್ಯುಸಿಯಾಗಿದ್ದಾರೆಂದು ರಾಜಣ್ಣ ಹೇಳಿದ್ರು.

