ರೂ. ಮೌಲ್ಯ ಕುಸಿತ: “ಮೋದಿಜಿಯ ಮಾಸ್ಟರ್ ಸ್ಟ್ರೋಕ್” ಎಂದು ಆಚರಿಸುತ್ತದೆಯೇ? ಎಂದು ಪ್ರಿಯಾಂಕ್ ಪ್ರಶ್ನೆ

Political News: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದ್ದು 1 ಡಾಲರ್ ಬೆಲೆ 90 ರೂಪಾಯಿಯಾಗಿದೆ. ಈ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಸೇರಿ ಬಿಜೆಪಿ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪ್ರಶ್ನಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆ ಕುಸಿತ ಕಂಡಿದೆ, 1$  = 90.21 INC. ಇದೇ ಮೊದಲ ಬಾರಿಗೆ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಭಾರತದ GDP ಅಂಕಿಅಂಶಗಳಿಗೆ C ಗ್ರೇಡ್ ನೀಡಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕೇಂದ್ರ ಸರ್ಕಾರವೇ ನೀಡಿದ ಮಾಹಿತಿಯಂತೆ ಕಳೆದ 5 ವರ್ಷಗಳಲ್ಲಿ 2 ಲಕ್ಷ ಕಂಪನಿಗಳು ಬಾಗಿಲು ಮುಚ್ಚಿವೆ, ಮತ್ತು ಕೇಂದ್ರ ಸರ್ಕಾರದ ಬಳಿ ಉದ್ಯೋಗ ಕಳೆದುಕೊಂಡವರ ಭದ್ರತೆಗೆ ಯಾವುದೇ ಯೋಜನೆಗಳು ಇಲ್ಲ. ಅಂತರರಾಷ್ಟ್ರೀಯ ಪಾಸ್ಪೋರ್ಟ್ ಸೂಚ್ಯಂಕದಲ್ಲಿ ಭಾರತದ ಪಾಸ್ಪೋರ್ಟ್ ಪಾತಾಳಕ್ಕೆ ಕುಸಿದಿದೆ. ಬಿಜೆಪಿ ಈ ವೈಫಲ್ಯಗಳನ್ನು “ಮೋದಿಜಿಯ ಮಾಸ್ಟರ್ ಸ್ಟ್ರೋಕ್” ಎಂದು ಆಚರಿಸಿಸುತ್ತದೆಯೇ? ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ.

About The Author