Monday, December 23, 2024

Latest Posts

Russia: ಮಾನಸಿಕ ಅಸ್ವಸ್ಥನಿಂದ 14 ವರ್ಷ ಬಂಧನದಲ್ಲಿದ್ದ ಯುವತಿ..! 1000 ಕ್ಕೂ ಹೆಚ್ಚು ಬಾರಿ ಅತ್ಯಾಚಾರ

- Advertisement -

ಅಂತರಾಷ್ಟ್ರೀಯ ಸುದ್ದಿ: ಪಶ್ಚಿಮ ರಷ್ಯಾದ ಚೆಲ್ಯಾಬಿಸ್ಕ್ ನಲ್ಲಿ ವ್ಲಾಡಿಮರ್ ಚೆಸ್ಕಿಡೋವ್ (55) ಎನ್ನುವ ವ್ಯಕ್ತಿ ಒಬ್ಬ ಯುವತಿಯನ್ನು 14 ವರ್ಷಗಳ ಹಿಂದೆ ಪಾರ್ಟಿಗೆಂದು ಕರೆದು ನಂತರ ವಾಪಸ್ಸು ಕಳುಹಿಸದೆ ಅವಳಿಗೆ ಚಿತ್ರ ಹಿಂಸೆ ನೀಡಿ  1000 ಕ್ಕಿಂತ ಅಧಿಕ ಬಾರಿ ಆಕೆಯನ್ನು ಅತ್ಯಾಚಾರ ಮಾಡಿದ್ದಾನೆ . 14 ವರ್ಷಗಳ  ನಂತರ ವ್ಲಾದಿಮರ್ ತಾಯಿ ಕರುಣೆ ತೋರಿ ಬಂಧನದಿಂದ ಬಿಡುಗಡೆಗೊಳಿಸಿದ್ದಾಳೆ ಮನೆಯಿಂದ ಹೊರಗೆ ಬಂದ ಯುವತಿ ನೇರವಾಗಿ ಠಾಣೆಗೆ ಹೋಗಿ ದೂರನ್ನು ನೀಡಿದ್ದಾಳೆ.

ಈ ಹಿಂದೆ ಸಂತ್ರಸ್ತೆ ಹಲವು ಬಾರಿ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟರೂ ಎಲ್ಲವೂ ವಿಫಲವಾಗಿದ್ದವು. ಆಕೆಗೆ ಚಾಕು ತೋರಿಸಿ ಬೆದರಿಸಿ ಮನೆಕೆಲಸಗಳನ್ನೆಲ್ಲ ಮಾಡಿಸಿಕೊಳ್ಳುತ್ತಿದ್ದನು.ಪ್ರಕರಣಗಳನ್ನು ದಾಖಲಿಸಿಕೊಂಡ ಪೋಲಿಸರು ಆರೋಪಿ ಮನೆಗೆ ಹೋಗಿ ಪರಿಶೀಲಿಸಿದಾಗ ಲೈಂಗಿಕ ಆಟಿಕೆಗಳು ಮತ್ತು ಡಿವಿಡಿಗಳು ಹಾಗೂ ಅಪಾಯಕಾರಿ ವಸ್ತುಗಳು  ದೊರಕಿವೆ ನಂತರ ನೆಲಮಹಡಿಯಲ್ಲಿ  ಪ್ರವೇಶಿಸಿದಾಗ ಮಾನವರ ಅವಶೇಷಗಳು ದೊರಕಿವೆ.

ಈ ಹಿಂದೆ 2011 ರಲ್ಲಿ ಇದೇ ರೀತಿ ಮಹಿಳೆಯೊಬ್ಬಳನ್ನು ಬಂದನದಲ್ಲಿರಿಸಿದ್ದನು ಇಬ್ಬರ ಮದ್ಯೆ ಜಗಳ ನಡೆದಾಗ ಚಾಕುವಿನಿಂದ ಇರಿದು  ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಲಾಡಿಮರನನ್ನು ಪೋಲಿಸರ ಸಮ್ಮುಖದಲ್ಲಿ ಮಾನಸಿಕ  ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

Pangolins Animal : ಪ್ಯಾಂಗೋಲಿನ್ ಮಾರಾಟಕ್ಕೆ ಯತ್ನ 8 ಮಂದಿ ಬಂಧನ..!

Train : ರೈಲಿಗೂ ಹುಟ್ಟು ಹಬ್ಬದ ಸಂಭ್ರಮ..! ಅಲಂಕಾರಗೊಂಡ ರೈಲು …!

Siddaramaiah : ಪ್ರಧಾನಿ ಮೋದಿಯನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ

- Advertisement -

Latest Posts

Don't Miss