ಯಾರೋ ಮಾಡಿರುವ ತಪ್ಪಿಗೆ ಕನ್ನಡ ಚಿತ್ರರಂಗವನ್ನ ದೂಷಿಸಬೇಡಿ ಅಂತಾ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು ಗುಡುಗಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಟನೆಯನ್ನೇ ನಂಬಿ ಬಂದವರು ಯಾರೂ ಕೆಟ್ಟದಾರಿ ತುಳಿದಿಲ್ಲ. ಆದರೆ ಕೆಲವರು ತೆವಲಿಗಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಂಥವರಿಂದ ಎಲ್ಲರಿಗೂ ಕೆಟ್ಟ ಹೆಸರು ಬರ್ತಿದೆ ಅಂತಾ ಕೆಂಡಕಾರಿದ್ರು.
ಇದೇ ವೇಳೆ ಇಂದ್ರಜಿತ್ ಲಂಕೇಶ್ ವಿರುದ್ಧವೂ ಮಾತನಾಡಿದ ಅವ್ರು…ಡ್ರಗ್ ಮಾಫಿಯಾ ಬಗ್ಗೆ ಮಾತನಾಡ್ತಿರೋ ಇಂದ್ರಜಿತ್ ವಾಣಿಜ್ಯ ಮಂಡಳಿಗೆ ಯಾವುದೇ ದೂರು ನೀಡಿಲ್ಲ. ಕಾನೂನು ಹೋರಾಟಕ್ಕೆ ಮುಂದಾಗಿರೋ ಇಂದ್ರಜಿತ್ರನ್ನ ಫಿಲಂ ಚೇಂಬರ್ಗೆ ಕರೆಸಿ ಮಾತನಾಡೋದು ಈ ಹೊತ್ತಲ್ಲಿ ಸರಿಯಲ್ಲ ಅಂತಾ ಹೇಳಿದ್ರು.
ಡ್ರಗ್ ಮಾಫಿಯಾ ಶುರುವಾದಾಗಿನಿಂದ ಹೇಳಿಕೆಗಳ ಮೇಲೆ ಹೇಳಿಕೆ ನೀಡ್ತಿರೋ ಪ್ರಶಾಂತ್ ಸಂಬರಗಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವ್ರು…ಆತ ಒಬ್ಬ ಸಾಮಾಜಿಕ ಕಾರ್ಯಕರ್ತ ಅಷ್ಟೇ. ಕನ್ನಡ ಚಿತ್ರರಂಗಕ್ಕೆ ಆ ವ್ಯಕ್ತಿಯ ಕೊಡುಗೆ ಏನೂ ಇಲ್ಲ . ಹೀಗಾಗಿ ಅವರ ಹೇಳಿಕೆಗೂ ಚಿತ್ರರಂಗಕ್ಕೂ ಯಾವುದೇ ಸಂಬಂಧ ಕಲ್ಪಿಸಬೇಡಿ ಅಂತಾ ಹೇಳಿದ್ರು.