ಸ್ಪೀಕರ್ ಗೆ ಕನ್ನಡ ಬರಲ್ವಾ..?! ಏನಿದು ಸದನದಲ್ಲಿ ಕನ್ನಡದ ಚರ್ಚೆ..?!

State News: Banglore :ಸ್ಪೀಕರ್ ಖಾದರ್ ಕನ್ನಡದ ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಚರ್ಚೆ ನಡೆದಿದೆ. ಸ್ಪೀಕರ್​ ಕನ್ನಡ ಬಗ್ಗೆ ಚರ್ಚೆ ಬಗ್ಗೆ  ಯು.ಟಿ.ಖಾದರ್​ ಮಾತನಾಡಿದ್ದಾರೆ. ಯತ್ನಾಳ್ ಅವರು ಯು.ಟಿ ಖಾದರ್ ಅವರ ಕನ್ನಡವನ್ನು ಪದೇ ಪದೇ ತಿದ್ದುತ್ತಲೇ ಇದ್ದಾರೆ.

“ಯತ್ನಾಳ್ ಪದೇ ಪದೆ ನನ್ನ ಕನ್ನಡ ಭಾಷೆ ಸರಿಪಡಿಸುತ್ತಾರೆ. ನನ್ನ ಕನ್ನಡ ಹೆಚ್ಚು ಕಡಿಮೆ ಇದೆ, ಆದ್ರೆ ನಮ್ಮ ಪ್ರೀತಿಯ ಭಾಷೆ. ಕನ್ನಡ ಪ್ರೀತಿ, ಸೋದರತೆ, ಸಾಮರಸ್ಯದ ಭಾಷೆ. ಅದಕ್ಕೆ ನಾನು ಕೃತಜ್ಞತೆ ಹೇಳುತ್ತಿದ್ದೇನೆ” ಎಂದರು.

ಈ ವೇಳೆ  ಶಾಸಕ ಬಸನಗೌಡ ಯತ್ನಾಳ್ ಮಧ್ಯಪ್ರವೇಶಿಸಿ, ಸಮಸ್ಯೆ ಏನೆಂದರೆ ನಮ್ಮ ಕನ್ನಡ ಬೇರೆ, ಹೈದರಾಬಾದ್ ಕನ್ನಡ ಬೇರೆ. ಮೈಸೂರು ಕನ್ನಡ ಬೇರೆ, ಮಂಗಳೂರು ಕನ್ನಡ ಬೇರೆ, ಮುಂಬೈ ಕನ್ನಡ ಬೇರೆ, ನಮಗೆ ನಿಮ್ಮ ಭಾಷೆ ಅರ್ಥ ಆಗಬೇಕು, ಅದಕ್ಕೆ ಆ್ಯಪ್​ ಹಾಕಿಕೊಡಿ. ಮೊಬೈಲ್​​ನಲ್ಲಿ ಯುಎಸ್ ಇಂಗ್ಲಿಷ್, ಇಂಗ್ಲೆಂಡ್ ಇಂಗ್ಲಿಷ್ ಇದ್ದ ಹಾಗೆ. ಲೋಕಸಭೆಯಲ್ಲಿ ಹಿಂದಿ‌ ಟು ಕನ್ನಡ, ಕನ್ನಡ ಟು ಹಿಂದಿ‌ ಇದ್ದ ಹಾಗೆ ಸ್ಪೀಕರ್ ಟು ಕನ್ನಡ ಆ್ಯಪ್​​ ಮಾಡಿ ಎಂದು ಕಾಲೆಳೆದು ಒಂದು ಕ್ಷಣ ತಮಾಷೆಯಾಗಿ ಮಾತನಾಡಿದರು.

ನಾಳೆ ಬಜೆಟ್ ಮಂಡನೆ…! ಐದು ಗ್ಯಾರಂಟಿಗೆ ಸಿಗಲಿದೆಯಾ ಅಸ್ತು..?!

ಗಗನಕ್ಕೇರಿದ ಟೊಮ್ಯಾಟೊ ಬೆಲೆ: ಗ್ರಾಹಕರು ಕಂಗಾಲು..!

ವಾಹನ ಸವಾರರಿಗೆ ಗುಡ್ ನ್ಯೂಸ್..?!

About The Author