Political News: Banglore: ಸದನದಲ್ಲಿ ವಿಪಕ್ಷ ನಾಯಕರ ಕೂಗು ಜೋರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸದನದಲ್ಲಿ ವಿಪಕ್ಷ ನಾಯಕ ಇಲ್ಲದಿರುವುದನ್ನೇ ಅಸ್ತ್ರವಾಗಿಸಿ ಬಿಜೆಪಿ ನಾಯಕರನ್ನು ಕಾಲೆಳೆದರು. ಮಾತಿನ ಮೂಲಕವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗರಿಗೆ ಬಾಣ ಬಿಟ್ಟಂತಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆಶಿ ಮಾತು ಪ್ರಾರಂಭಕ್ಕೂ ಮುಂಚೆ ವಿಪಕ್ಷ ನಾಯಕರಿಗೆ ಪ್ರಣಾಮ ಎನ್ನತ್ತಲೇ ಮತ್ತೆ ಸಾರಿ ಸಾರಿ ವಿಪಕ್ಷ ನಾಯಕರಿಲ್ಲ ಎಂಬುವುದಾಗಿ ಬಿಜೆಪಿ ಇನ್ನೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡದೇ ಇರುವುದಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದರು.
ಇದೇ ವಿಚಾರವಾಗಿ ಸದನದಲ್ಲಿ ಸ್ವಲ್ಪ ಸಮಯ ಮಾತಿನ ಮಳೆಗರಿಯಿತು. ಬಿಜೆಪಿಗರೂ ಸುಮ್ಮನಿರದೆ ಒಬ್ಬರಿಂದೊಬ್ಬರು ವಾಗ್ವಾದ ಮಾಡಲಾರಂಭಿಸಿದರು. ಆರ್ ಅಶೋಕ್ ಎದ್ದು ನೀವು ಮುಖ್ಯಮಂತ್ರಿ ಮಾಡೋದಕ್ಕೆ ಎರಡು ದಿನಗಳು ತಗೊಂಡ್ರಿ, ನಾವು ವಿಪಕ್ಷ ನಾಯಕರನ್ನು ನೇಮಿಸುತ್ತೇವೆ. ಎಂದು ಪ್ರತ್ಯುತ್ತರ ನೀಡಿದರು.
10ಕೋಟಿ ರೂ.ಗೆ ಅಧಿಕಾರಿಗಳ ವರ್ಗಾವಣೆ..! ಏನಿದು ಹೆಚ್.ಡಿ.ಕೆ ಹೊಸ ಬಾಂಬ್..?!