Sunday, September 8, 2024

Latest Posts

ಮನೆಯನ್ನೇ ಪಕ್ಷಿಗಳ ಆಶ್ರಯತಾಣ ಮಾಡಿದ ಸಲಾವುದ್ದೀನ್

- Advertisement -

www.karnatakatv.net : ರಾಯಚೂರು: ನಾಗರೀಕತೆ ಬೆಳೆದಂತೆ ಮನುಷ್ಯನ ಜೊತೆ ಜೊತೆಗೆ ಬದುಕುತ್ತಿದ್ದ ಪಕ್ಷಿ, ಪ್ರಾಣಿಗಳು ದೂರವಾಗತ್ತಲೇ ಇವೆ. ಹೀಗೆ  ದೂರವಾದವುಗಳಲ್ಲಿ ಗುಬ್ಬಚ್ಚಿ ಸಂತತಿ ಪ್ರಮುಖ. ಆದ್ರೆ ಇಲ್ಲೊಬ್ಬ ಪಕ್ಷಿ ಪ್ರೇಮಿ ತಮ್ಮ ಮನೆಯನ್ನೇ ಪಕ್ಷಿಗಳ ಆಶ್ರಯತಾಣ ಮಾಡಿದ್ದಾರೆ.

ಯೆಸ್… ಜಿಲ್ಲೆಯ ಮಾನ್ವಿ ಪಟ್ಟಣದ ಕ್ಲಾಸ್ ಒನ್ ಸಿವಿಲ್ ಕಾಂಟ್ರಾಕ್ಟರ್ ಸಲಾವುದ್ದಿನ್ ಎಂಬುವವರೇ ನಾವು ಹೇಳ ಹೊರಟಿರುವ ಆ ಪಕ್ಷಿ ಪ್ರೇಮಿ..,  ಕಳೆದ ನಾಲ್ಕುವರೆ ವರ್ಷದಿಂದ ತಮ್ಮ ಮನೆಯನ್ನೇ ಪಕ್ಷಿಗಳಿಗಾಗಿ ಮೀಸಲಿಟ್ಟಿದ್ದಾರೆ.

ಮನೆಯ ಗೋಡೆ, ಛಾವಣಿಯಲ್ಲಿ ಬಿದಿರು, ಟೈರ್, ಮಡಿಕೆ, ಪೈಪ್‍ಗಳ ಮೂಲಕ ಮನೆಯಲ್ಲೇ ಪಕ್ಷಿಗಳಿಗೆ ಆಹಾರ, ನೀರು ಜೊತೆಗೆ ಆಶ್ರಯ ಸಿಗುವಂತೆ ಮಾಡಿದ್ದಾರೆ. ಗುಬ್ಬಚ್ಚಿ ಸಂತತಿ ರಕ್ಷಣೆಯೇ ನಮ್ಮ ಉದ್ದೇಶ ಎಂದು ಹೇಲುವ ಸಲಾವುದ್ದೀನ್

ಮನೆಗೆ ನಿತ್ಯ ಅತಿಥಿಗಳಾಗಿ ಗುಬ್ಬಚ್ಚಿ, ಮೈನಾ, ದೊಡ್ಡ ಮೈನಾ, ಹಳದಿ ಗುಬ್ಬಿ, ರಾಬಿನ್, ಬೆಳವ, ಬುಲ್ ಬುಲ್ ಪಕ್ಷಿಗಳು ಬರುತ್ತವೆ… ಸಲಾವುದ್ದೀನ್ ಅವರ ಕಾರ್ಯಕ್ಕೆ ಪತ್ನಿ, ಮಕ್ಕಳು ಸಾಥ್ ನೀಡಿದ್ದಾರೆ.  ಒಟ್ನಲ್ಲಿ ಕಾಂಕ್ರಿಟ್ ಕಾಡಿನ ಮಧ್ಯೆ ಮತ್ತೆ ಹಕ್ಕಿಗಳ ನಿನಾದ ಕೇಳುವಂತೆ ಮಾಡ್ತಿದ್ದಾರೆ ಸಲಾವುದ್ದೀನ್.. ಇಂಥವರಿಗೆ ನಮ್ಮ ಕಡೆಯಿಂದ ಒಂದು ಸಲಾಮ್.

ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು

- Advertisement -

Latest Posts

Don't Miss