ಕರ್ನಾಟಕದ ಉಡುಪಿ ಜಿಲ್ಲೆಯ ಕಾಲೇಜೊಂದರಲ್ಲಿ ಶುರುವಾದದ ಹಿಜಬ್ ವಿವಾದ ಇಂದು ಪ್ರಪಂಚದಾದ್ಯಂತ ಸದ್ದು ಮಾಡುತ್ತಿದೆ. ವಿಷಯ ಹೈಕೋರ್ಟ್ ಮೆಟ್ಟಿಲೇರಿದೆ. ಎಲ್ಲಿ ಗಲಾಟೆಯಾಗಿ ಹೆಚ್ಚು ಕಡಿಮೆಯಾಗುತ್ತದೆಯೋ ಎಂಬ ಕಾರಣಕ್ಕೆ, ಸರ್ಕಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ. ಅಕ್ಕ ಪಕ್ಕದ ದೇಶದವರು, ಸಿನಿಮಾ ಕಲಾವಿದರೆಲ್ಲ ಹಿಜಬ್ ವಿಷಯದ ಬಗ್ಗೆ ಚರ್ಚಿಸುತ್ತಿದ್ದಾರೆ. ಪ್ರಪಂಚದಾದ್ಯಂತ ಈ ಬಗ್ಗೆ ಪರ ವಿರೋಧ ಚರ್ಚೆಯಾಗುತ್ತಿದೆ.
ಇಂಥ ಸಂದರ್ಭದಲ್ಲಿ ಸಮಾಜವಾದಿ ಪಾರ್ಟಿಯ ಮಹಿಳಾ ನಾಯಕಿಯೊಬ್ಬರು ಹಿಜಬ್ ಮುಟ್ಟಿಲಿಕ್ಕೆ ಪ್ರಯತ್ನಿಸಿದ್ರೆ ಕೈ ಕತ್ತರಿಸುವುದಾಗಿ ಹೇಳಿಕೆ ನೀಡಿದ್ದಾರೆ. ಸಮಾಜವಾದಿ ಪಾರ್ಟಿಯ ರುಬಿನಾ ಖಾನಮ್ ಎಂಬ ಲೀಡರ್, ಹಿಜಬ್ ಅನ್ನೋದು ಭಾರತೀಯ ಸಂಸ್ಕೃತಿಯ ಒಂದು ಭಾಗ. ಅದನ್ನ ಇಂದಿನ ಕಾಲದ ರಾವಣರೂ ನಾಶ ಮಾಡೋಕ್ಕೆ ಪ್ರಯತ್ನಿಸುತ್ತಿದ್ದಾರೆ. ಭಾರತದ ಮಹಿಳೆಯರು ಹೆಣ್ಣುಮಕ್ಕಳ ಆತ್ಮಸಮ್ಮಾನದ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೇ, ಭಾರತ ವಿವಿಧತೆಯ ದೇಶವಾಗಿದೆ. ತಲೆಗೆ ಕಟ್ಟುವ ಪೇಟ, ನಾಮ, ಹಿಜಬ್ ಇದೆಲ್ಲಾ ಸಂಸ್ಕೃತಿಯ ಭಾಗವಾಗಿದೆ. ಇಂಥ ದೇಶದಲ್ಲಿರುವ ಈಗಿನ ಕಾಲದ ರಾವಣರು, ನಮ್ಮ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ನೀವು ಮಹಿಳೆಯರನ್ನು ದುರ್ಬಲರು ಎಂದುಕೊಳ್ಳಬೇಡಿ. ಸರ್ಕಾರ ಯಾವ ಪಾರ್ಟಿಯದ್ದಾದರೂ ಆಗಲಿ, ಮಹಿಳೆಯರ ಹಿಜಬ್ ಮೇಲೆ ಕೈ ಹಾಕುವ ದುಸ್ಸಾಹಸ ಮಾಡಿದ್ದಲ್ಲಿ, ನಾವು ಝಾನ್ಸಿಯ ರಾಣಿ ಮತ್ತು ರಜಿಯಾ ಸುಲ್ತಾನ್ ಆಗಿ, ನಿಮ್ಮ ಕೈ ಕಡಿದು ಹಾಕುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.




