Sandalwood: ಉಸಿರು ಹೋದ್ಮೇಲೆ ಹೆಸರು ಉಳಿಬೇಕು: Moogu Suresh Pocast

Sandalwood: ಹಾಸ್ಯ ಕಲಾವಿದರಾಗಿರುವ ಮೂಗು ಸುರೇಶ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಉಸಿರು ಹೋದಮೇಲೂ ನನ್ನ ಹೆಸರು ಇರಲಿ ಅಂತಾ ನಾನು ಬಯಸುತ್ತೇನೆ ಎಂದಿದ್ದಾರೆ.

ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡಿರುವ ಅವರು ಯಾವುದೇ ಸಂಘಗಳಾಗಲಿ, ಅಲ್ಲಿ ಬರುವ ಇಂದಿನ ಪೀಳಿಗೆಯವರಿಗೆ ಹಿರಿಯರು ಕೆಲಸವನ್ನು ವಿವರಿಸಿ, ಸಂಘ ಮುನ್ನಡೆಸಲು ಸಹಾಯವಾಗಬೇಕು. ಆಗಲೇ ಸಂಘ ಉಳಿಯುತ್ತದೆ. ಹಲವು ಸಂಘಟನೆಗಳಿಗೆ ರಾಜಕೀಯ ಸಂಘಟನೆ, ಭಾಷಾ ಸಂಘಟನೆ ಎಲ್ಲವೂ ಇದೆ. ಕೆಲವು ದಿನಗಳ ಕಾಲ ಅಲ್ಲಿರುವವರು ಕೆಲಸ ಮಾಡಿ, ಸಂಘಟನೆಗಳನ್ನು ನಡೆಸಿಕ“ಂಡು ಹೋಗುತ್ತಾರೆ. ಆದರೆ ಅದೆಷ್ಟೋ ಸಂಘಟನೆಗಳು ಹೆಚ್ಚು ಕಾಲ ಇರೋದಿಲ್ಲ ಎನ್ನುವುದೇ ಬೇಸರವೆಂದಿದ್ದಾರೆ.

ಇನ್ನು ಸಿನಿಮಾ ಬಗ್ಗೆ ಮಾತನಾಡಿರುವ ಸುರೇಶ್, ಇತ್ತೀಚೆಗೆ ಮಂಗಳೂರು ಬಾಯ್ಸ್ ಮಾಡುವ ಸಿನಿಮಾ ಗೆಲ್ಲುತ್ತದೆ ಅಂತಾರೆ. ಗ್ಯಾಂಗ್ ಇದೆ ಅಂತಾರೆ. ನೀವೂ ಗ್ಯಾಂಗ್ ಕಟ್ಟಿ, ನೀವೂ ಸಿನಿಮಾ ಮಾಡಿ. ಭೂತಯ್ಯನ ಮಗ ಅಯ್ಯು, ಕೋಟಿಗೋಬ್ಬ ಇಂಥ ಸಿನಿಮಾಗಳೆಲ್ಲ ಗೆದ್ದಿಲ್ಲವಾ..? ಉತ್ತಮ ಸಿನಿಮಾ ಮಾಡಿದ್ರೆ ಗೆದ್ದೇ ಗೆಲ್ಲತ್ತೆ ಅಂತಾ ಸುರೇಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author