Sandalwood: ಕಲಾವಿದರಾಗಿರುವ ಬಲ್‌ರಾಜ್ವಾಡಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಕಾಂತಾರದಲ್ಲಿ ಸಿಕ್ಕ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಕಾಂತಾರ ಭಾಗ 1ರಲ್ಲಿ ಜಬ್ಬಜ್ಜನ ಪಾತ್ರದಲ್ಲಿ ಬಲ್‌ರಾಜ್ ಮಿಂಚಿದ್ದರು. ಈ ಬಗ್ಗೆ ಸ್ವತಃ ಅವರೇ ವಿವರಿಸಿದ್ದಾರೆ.
ಬಲ್‌ರಾಜ್ ಅವರಿಗೆ ಪಾತ್ರ ನಿಭಾಯಿಸಲು ಕಾಲ್ ಬರುತ್ತದೆ. ಅವರು ಹೋಗಿ ಫೋಟೋಶೂಟ್ ಮಾಡಿಸಿ, ಪಾತ್ರದ ರಿಹರ್ಸಲ್ ಎಲ್ಲ ಮಾಡಿ, ರಿಷಬ್ ಶೆಟ್ಟಿ ಅವರನ್ನು ಸಹ ಭೇಟಿಯಾಗುತ್ತಾರೆ. ಆಗ ಬಲ್‌ರಾಜ್ ಅವರಿಗೆ ತಿಳಿದಿದ್ದೇನೆಂದರೆ, ರಿಷಬ್ ಅವರು ಯೂನಿಕ್ ಪರ್ಸನಾಲಿಟಿ. ಸಂಪೂರ್ಣವಾಗಿ ವಿಭಿನ್ನವಾಗಿರುವ ವ್ಯಕ್ತಿ. ಅವರು ಸಿನಿಮಾದಲ್ಲಿ ಪಾತ್ರ ನಿರ್ವಹಿಸುವ ಬಗ್ಗೆ ಮಾತನಾಡಿದರು ಅಂತಾರೆ ಬಲ್‌ರಾಜ್.
ಬಳಿಕ ಪಾತ್ರದ ಬಗ್ಗೆ ವಿವರಿಸಿ, ಅಲ್ಲಿಂದ ಕಾಂತಾರ ಜರ್ನಿ ಶುರುವಾಯ್ತು. 96 ದಿನಗಳು ಶೂಟಿಂಗ್ ನಡೆದವು. ಹಲವು ತಿಂಗಳು ಡಬ್ಬಿಂಗ್ ಎಲ್ಲವೂ ಮಾಡಲಾಯಿತು. ಶ್ರಮದ ವಿಚಾರಕ್ಕೆ ಬಂದ್ರೆ ನನ್ನ ಶ್ರಮ ಶೂನ್ಯ. ಆದರೆ ಕಾಂತಾರ ಟೀಂ ತುಂಬಾ ಶ್ರಮ ಪಟ್ಟಿದೆ. ಎಲ್ಲರೂ ಸೇರಿ 100 ಶ್ರಮ ಹಾಕಿದ್ದರೆ, ರಿಷಬ್ ಅವರು 100 ಶ್ರಮ ಹಾಕಿದ್ದಾರೆ. ಅಷ್ಟು ಅತ್ಯುತ್ತಮವಾಗಿ ಅವರು ಕಾಂತಾರದ ಕೆಲಸವನ್ನು ನಿಭಾಯಿಸಿದ್ದಾರೆ ಎಂದು ರಿಷಬ್ ಬಗ್ಗೆ ಬಲ್‌ರಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

