ಕಿಡ್ನಿ ಮತ್ತು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಮಿಮಿಕ್ರಿ ರಾಜಗೋಪಾಲ್(69) ನಿನ್ನೆ ರಾತ್ರಿ ಒಂದು ಗಂಟೆಗೆ, ಬೆಂಗಳೂರಿನ ಕೆಂಗೇರಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ವೇದಿಕೆಯಲ್ಲಿ ಇವರು ಮಿಮಿಕ್ರಿ ಮಾಡುತ್ತಿದ್ದರಿಂದ ಇವರಿಗೆ ಮಿಮಿಕ್ರಿ ರಾಜಗೋಪಾಲ್ ಎಂಬ ಹೆಸರು ಬಂದಿತ್ತು. ಇಷ್ಟೇ ಅಲ್ಲದೇ ಇವರು ಕನ್ನಡದಲ್ಲಿ 600ಕ್ಕೂ ಹೆಚ್ಚು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಕನ್ನಡದಲ್ಲಿ ಪ್ರಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡಿದ್ದ ಮಿಮಿಕ್ರಿ ರಾಜಗೋಪಾಲ್, ಇತ್ತೀಚಿನ ದಿನಗಳಲ್ಲಿ ಅವಕಾಶ ಸಿಗದ ಕಾರಣ ಸಿನಿಇಂಡಸ್ಟ್ರಿಯಲ್ಲಿ ಹೆಚ್ಚಾಗಿ ಕಾಣ ಸಿಗಲಿಲ್ಲ. ಇನ್ನು ಮಿಮಿಕ್ರಿ ರಾಜಗೋಪಾಲ್ ಪತ್ನಿ ಸೇರಿ ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಇನ್ನು ಡಿಸಿಎಂ ಅಶ್ವತ್ಥ ನಾರಾಯಣ್, ರಾಜಗೋಪಾಲ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ, ಕಿರುತೆರೆ ಕಲಾವಿದ, ಮಿಮಿಕ್ರಿ ರಾಜಗೋಪಾಲ್ ಅವರ ನಿಧನದ ಸುದ್ದಿ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬ, ಹಿತೈಷಿ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.
ಈ ವರ್ಷ ಭಾರತೀಯ ಸಿನಿ ಇಂಡಸ್ಟ್ರಿಯಲ್ಲಿ ಪದೇ ಪದೇ ಹಲವು ಕಲಾವಿದರು ಸಾವನ್ನಪ್ಪುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ. 3 ವಾರದ ಹಿಂದಷ್ಟೇ ಸುಶಾಂತಿ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದರು. ಇನ್ನು ಅದಕ್ಕೂ ಒಂದು ವಾರ ಮೊದಲು ಚಿರಂಜೀವಿ ಸರ್ಜಾರ ಹಠಾತ್ ಸಾವು ಎಲ್ಲರಿಗೂ ಶಾಕ್ ನೀಡಿತ್ತು. ಅಷ್ಟೇ ಅಲ್ಲದೇ, ಹಾಸ್ಯನಟ ಬುಲೆಟ್ ಪ್ರಕಾಶ್ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು.





