Friday, October 17, 2025

Latest Posts

ಸ್ಯಾಂಡಲ್ ವುಡ್ ನಟಿ ನೇಣಿಗೆ ಶರಣು..!

- Advertisement -

www.karnatakatv.net : ಸ್ಯಾಂಡಲ್ ವುಡ್ ನ ನಟಿ ಸವಿ ಮಾದಪ್ಪ ನೇಣಿಗೆ ಶರಣಾಗಿದ್ದಾರೆ. ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಹೌದು ಇತ್ತಿಚೇಗೆ ಸೆಲೆಬ್ರಿಟಿಗಳು ಆತ್ಮಹತ್ತೆ ಮಾಡಿಕೊಳ್ಉವ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಬಾಯ್ ಫ್ರೆಂಡ್ ಜೋತೆ  ದೊಡ್ಡಬೆಲೆ ಗ್ರಾಮದಲ್ಲಿ ವಾಸವಿದ್ದರು. ಸವಿ ಅವರ ಬಾಯ್ ಊಟವನ್ನು ತರೊದಕ್ಕೆ ಹೋದಾಗ ಸವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸವಿ ಮಾದಪ್ಪ ಕೊಡಗು ಜಿಲ್ಲೆಯ ಕುಶಾಲನಗರ ಮೂಲದವರು. ಚೌಕಟ್ಟು , ಫನ್ ಸಿನಿಮಾಗಳಲ್ಲಿ ನಟಿಸಿದ ಇವರು ಇತ್ತೀಗಷ್ಟೇ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದರು, ‘ ನಿಮ್ಮ ಜೀವನದ ಬಗ್ಗೆ ಹಾಗೂ ಗುರಿ ಬಗ್ಗೆ ಹೆಚ್ಚು ಫೋಕಸ್ ಮಾಡಿದರೆ ನೀವು ನಿಮ್ಮ ಜೀವನದಲ್ಲಿ ಸಾಕಷ್ಟು ಜನರನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಹೇಳಿ ಈಗ ತಾವೆ ತಮ್ಮ ಜೀವವನ್ನು ಬಿಟ್ಟು ಹೋಗಿದ್ದಾರೆ.

 ತಮ್ಮ ಸಿನಿಮಾದ ಬಗ್ಗೆ ಮಾತನಾಡಿದ ಸವಿ  ‘ಚೌಕಟ್ಟು’ ಸಿನಿಮಾ  ನನಗೆ ಮೊದಲ ಸಿನಿಮಾ ನಟಿಯಾಗಿ ನನಗೆ ಹಲವು ಕನಸುಗಳಿವೆ, ನನಗೆ ಸಿಕ್ಕ ಪಾತ್ರಕಿಂತ ಸವಾಲಿನ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ನನಗೆ ತುಂಬಾ ಇಷ್ಟ ಎಂದು ತಮ್ಮ ಅಭಿಪ್ರಾಯವನ್ನು  ಅಂಚಿಕೊಂಡಿದ್ದರು. ತುಂಬಾ ಕನಸನ್ನು ಕಟ್ಟಿದ್ದ ಸವಿ ಸಿನಿಮಾಟೋಗ್ರಾಫಿಯಲ್ಲೂ ಕಾಣಿಸಿಕೊಳ್ಳುವ ಕನಸನ್ನು ಕಟ್ಟಿದ್ದರು ಆದರೆ ಅದೇಲ್ಲ ಈಗ ಹುಸಿಯಾಗಿದೆ.

- Advertisement -

Latest Posts

Don't Miss