Sandalwood: ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ನೇಣಿಗೆ ಶರಣು

Sandalwood: ನಟಿ ಕೃಷಿ ತಾಪಂಡ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವರ ಗೆಳೆಯ ಮತ್ತು ಉದ್ಯಮಿ ವೈಶಾಕ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಆರ್‌ಆರ್‌ ನಗರದಲ್ಲಿರುವ ಕೃಷಿ ಮನೆಯಲ್ಲಿ ಈ ಘಟನೆ ನಡೆದಿದೆ.

ಸಾವಿಗೂ ಮುನ್ನ ವೈಶಾಕ್ ತಾನು ಆತ್ಮಹತ್ಯೆ ಮಾಡಿಕ“ಳ್ಳುತ್ತಿದ್ದೇನೆ ಎಂದು ಕೃಷಿ ತಾಪಂಡಗೆ ಕಾಲ್ ಮಾಡಿ ತಿಳಿಸಿದ್ದಾನೆ. ತಕ್ಷಣ ವಿಷಯ ತಿಳಿದ ಕೃಷಿ ಅವರ ಮನೆಯವರಿಗೆ ವಿಷಯ ತಿಳಿಸಿದ್ದರೂ, ಮನೆಯವರು ಸ್ಥಳಕ್ಕೆ ಬರುವ ಮುನ್ನವೇ ವೈಶಾಕ್ ಆತ್ಮಹತ್ಯೆಗೆ ಶರಣಾಗಿದ್ದ ಎನ್ನಲಾಗಿದೆ.

ಇನ್ನು ಈ ಹಿಂದೆ ಉದ್ಯಮಿ ಅರವಿಂದ ರೆಡ್ಡಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟ ಕೇಸ್‌ನಲ್ಲಿ ವೈಶಾಕ್ ಜೈಲು ಸೇರಿದ್ದ. ಅರವಿಂದ್ ರೆಡ್ಡಿ ಮತ್ತು ಕೃಷಿ ಅಫೇರ್ ಇರುವ ಬಗ್ಗೆ ಆಕೆಯೇ ಸಂದರ್ಶನದಲ್ಲಿ ಹೇಳಿದ್ದಳು. ಈ ವಿಷಯವಾಗಿ ಅರವಿಂದ್ ರೆಡ್ಡಿಗೆ ವೈಶಾಕ್ ಪತ್ರ ಬರೆದು ಕೋಟಿ ಕೋಟಿ ಹಣಕ್ಕೆ ಬೆದರಿಕೆ ಇಟ್ಟಿದ್ದ.

ಆಗ ಅರವಿಂದ್ ರೆಡ್ಡಿ ವೈಶಾಕ್ ವಿರುದ್ಧ ಪೋಲೀಸರಿಗೆ ದೂರು ನೀಡಿದ್ದ. ಈ ಕೇಸ್‌ನಲ್ಲಿ ವೈಶಾಕ್ ಜಾಲಿಗೂ ಹೋಗಿ ಬಂದಿದ್ದ. ಈ ವಿಷಯಕ್ಕಾಗಿಯೇ ಅರವಿಂದ್ ಡಿಪ್ರೆಶನ್‌ಗೆ ಹೋಗಿದ್ದ ಎನ್ನಲಾಗಿದ್ದು, ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಶಂಕಿಸಲಾಗಿದೆ.

ವಿಷಯ ತಿಳಿದ ಆರ್‌ಆರ್‌ನಗರ ಪೋಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ದೂರು ದಾಖಲಾಗಿದೆ. ತನಿಖೆ ಬಳಿಕ ಸತ್ಯ ತಿಳಿಯಬೇಕಿದೆ.

About The Author