Sandalwood: ಆ್ಯಂಕರ್ ಪ್ರಶ್ನೆಗೆ ಭಯಗೊಂಡ ನಟಿ ಮಹತಿ ಭಟ್

Sandalwood: ಡ್ರಾಮಾ ಜೂನಿಯರ್ಸ್ ಖ್ಯಾತಿಯ ಮಹತಿ ಕರ್ನಾಟಕ ಟಿವಿ ಜತೆ ಸಂದರ್ಶನದಲ್ಲಿ ಮಾತನಾಡಿದ್ದು, ನವರಸಗಳ ಅಭಿನಯ ಮಾಡಿಸಿದ್ದಾರೆ. ಅಲ್ಲದೇ ಮಹತಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಪ್ರಶ್ನೆಗೆ ಭಯವಾದ ಮಹತಿ, ಏನ್ರೀ ಹಿಂಗೆಲ್ಲಾ ಕೇಳ್ತಿದೀರಾ.. ನನಗೆ ಭಯವಾಗತ್ತೆ ಅಂದಿದ್ದಾರೆ. ಹಾಗಾದ್ರೆ ಮಹತಿಗೆ ನಮ್ಮ ಆ್ಯಂಕರ್ ಅಂಥಾದ್ದೇನು ಕೇಳಿದ್ರು ಅಂತಾ ನೀವೇ ನೋಡಿ.

ಮಹತಿಗೆ ನಿಮಗೆ ಯಾವ ರೀತಿಯ ಪಾತ್ರ ಮಾಡಲು ಇಷ್ಟವೆಂದು ಕೇಳಿದಾಗ, ನನಗೆ ಕ್ರೈಮ್ ಥ್ರಿಲ್ಲರ್‌ ಸಿನಿಮಾದಲ್ಲಿ ಅಭಿನಯಿಸಬೇಕು ಅಂತಾ ಹೇಳಿದ್ದಾರೆ ಮಹತಿ. ಇನ್ನು ಇದಕ್ಕೆ ಕಾರಣವನ್ನೂ ಹೇಳಿದ್ದಾರೆ. ಮಹತಿಗೆ ಕ್ರೈಮ್ ಥ್ರಿಲ್ಲರ್ ಕಥೆಗಳನ್ನು ಓದುವುದಂದ್ರೆ ಇಷ್ಟ. ಹಾಗಾಗಿ ಅಂಥದ್ದೇ ಪಾತ್ರ ಮಾಡಲು ಮಹತಿ ಇಚ್ಛಿಸುತ್ತಾರಂತೆ.

ಅಲ್ಲದೇ ತುಂಬಾ ಕಷ್ಟ ಪಡುವ ಹುಡುಗಿಯ ಪಾತ್ರದಲ್ಲಿ ಅಭಿನಯಿಸಬೇಕು ಅಂತಾ ಮಹತಿಗೆ ಆಸೆ ಅಂತೆ. ಮಹತಿ ನವರಸಗಳನ್ನು ಹೇಗೆ ಮಾಡಿ ತೋರಿಸಿದ್ರು ಅಂತಾ ತಿಳಿಯೋಕ್ಕೆ ಈ ವೀಡಿಯೋ ನೋಡಿ.

About The Author