Sandalwood: ಅಮ್ಮ ಅಂದ್ರೆ ಅರುಣಾ ಬಾಲರಾಜ್ : STAR ನಟರಿಗೆಲ್ಲರಿಗೂ ಅಮ್ಮ: Aruna Balraj Podcast

Sandalwood: ಸ್ಟಾರ್ ನಟ-ನಟಿಯರ ತಾಯಿಯ ಪಾತ್ರದಲ್ಲಿ ಬಣ್ಣ ಹಚ್ಚಿರುವ ಅರುಣಾ ಬಾಲ್‌ರಾಜ್ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅವರು ಯಾವ ಸಿರಿಯಲ್ ಮೂಲಕ ಕನ್ನಡ ಸಿನಿ ಲೋಕಕ್ಕೆ ಬಂದರು ಅನ್ನೋ ಕುತೂಹಲಕಾರಿ ಮಾಹಿತಿ ಬಗ್ಗೆ ವಿವರಿಸಿದ್ದಾರೆ.

ಅರುಣಾ ಬಾಲ್‌ರಾಜ್ ಅವರು ಅಮ್ಮನ ಪಾತ್ರದ ಮೂಲಕವೇ ಕನ್ನಡ ಸಿನಿ ಲೋಕಕ್ಕೆ ಬಂದರು. ಹಾಸನದ ಚೆನ್ನರಾಯ ಪಟ್ಟಣದವರಾಗಿರುವ ಅರುಣಾ ಅವರು, ಅಲ್ಲೇ 7ನೇ ತರಗತಿವರೆಗೂ ಓದಿದ್ದರು. ಬಳಿಕ ತಂದೆ ಊರಾದ ಬೆಂಗಳೂರಿಗೆ ಬಂದು, ವಿದ್ಯಾಭ್ಯಾಸವನ್ನು ಮುಂದುವರಿಸಿದರು.

ಬಳಿಕ ಡಿಗ್ರಿ ಮುಗಿತಿದ್ದ ಹಾಗೆ ಅರುಣಾ ಅವರಿಗೆ ವಿವಾಹವಾಗುತ್ತದೆ. ಅವರ ಪತಿ ಬಳ್ಳಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣಕ್ಕೆ, ಅವರು ಕೂಡ ಪತಿಯ ಜತೆ ಬಳ್ಳಾರಿಗೆ ಶಿಫ್ಟ್ ಆಗುತ್ತಾರೆ. ಬಳಿಕ ಮಗಳು ಜನಿಸಿದಾಗ, ಬೆಂಗಳೂರಿಗೆ ಬಾಣಂತನಕ್ಕೆ ಬರುತ್ತಾರೆ. ಬಳಿಕ ಮತ್ತೆ ಬೆಂಗಳೂರಿಗೆ ಶಿಫ್ಟ್ ಆಗುತ್ತಾರೆ.

ಬಳಿಕ ಅರುಣಾ ಅವರ ಸೋದರ ಮಾವನಿಗೆ ನಾಟಕವೆಂದರೆ ಇಷ್ಟವಿತ್ತು. ಹಾಗಾಗಿ ಅವರೇ 1 ತಂಡ ಕಟ್ಟಿದ್ದರು. ಪ್ರತೀವರ್ಷ ಬೇರೆ ಬೇರೆ ಸ್ಪರ್ಧೆಯಲ್ಲಿ ತಂಡದ ಜತೆ ಭಾಗವಹಿಸುತ್ತಿದ್ದರು. ಹಾಗಾಗಿ ಅರುಣಾ ಅವರಿಗೂ ನಟನೆಯ ಆಸಕ್ತಿ ಬೆಳೆಯಿತು.

ವಿವಾಹವಾದ ಬಳಿಕ ಅರುಣಾ ಅವರ ಪತಿಯ ತಂದೆಗೂ ನಟನೆಯಲ್ಲಿ ಆಸಕ್ತಿ ಇದ್ದಿದ್ದಕ್ಕೆ, ಅರುಣಾ ಅವರಿಗೆ ಸಿನಿ ರಂಗಕ್ಕೆ ಬರಲು ಅನುಕೂಲವಾಯಿತು. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

 

 

About The Author