Sandalwood: ಜೀ ಕನ್ನಡದಲ್ಲಿ ಬರುವ ಲಕ್ಷ್ಮೀ ನಿವಾಸ ಸಿರಿಯಲ್‌ನಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಚೆಲುವಿ ಪಾತ್ರ ಕೂಡ ಒಂದು. ಮುಂಚೆ ಎಲ್ಲಾ ಬಜಾರಿ ಪಾತ್ರದಂತಿದ್ದ ಚೆಲುವಿ ಪಾತ್ರ ಇದೀಗ ಓರ್ವ ಜವಾಬ್ದಾರಿ ಮಡದಿಯ ಪಾತ್ರವಾಗಿ ಬದಲಾಗಿದೆ. ಈ ಪಾತ್ರ ನಿರ್ವಹಿಸುತ್ತಿರುವ ಚೆರಿಕಾ ಮೂರ್ತಿ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಪಯಣದ ಬಗ್ಗೆ ಹೇಳಿಕ“ಂಡಿದ್ದಾರೆ.
ಹಾಸನದವರಾದ ಚೆರಿಕಾ, ಅವರು 10 ವರ್ಷದಲ್ಲೇ 12 ಶಾಲೆ ಚೇಂಜ್ ಮಾಡಿದ್ದಾರಂತೆ. ಚೆರಿಕಾರ ಅಮ್ಮನಿಗೆ ಚೆರಿಕಾರನ್ನು ಸಿನಿಮಾ ರಂಗಕ್ಕೆ ಕರೆತರುವ ಆಸೆ ಇತ್ತು. ಹೀಗಾಗಿ ಸಿರಿಯಲ್‌ನಲ್ಲಿ ನಟಿಸುವ ಅವಕಾಶಕ್ಕಾಗಿ ಚೆರಿಕಾ ಅವರ ಅಮ್ಮನೇ ಹುಡುಕಾಡುತ್ತಿದ್ದರಂತೆ. ಚೆರಿಕಾ ಅವರಿಗೆ ಸಿರಿಯಲ್‌ನಲ್ಲಿ ನಟಿಸುವ ಅವಕಾಶ ಅಮ್ಮನಿಂದಲೇ ಬಂದಿದ್ದೆಂದು ಅವರೇ ಹೇಳುತ್ತಾರೆ.
ಮಂಗಳೂರ್ ಹುಡ್ಗಿ ಹುಬ್ಬಳ್ಳಿ ಹುಡಗಾ, ಬಯಸದೇ ಬಳಿ ಬಂದೆ, ಲಕ್ಷಣ ಸೇರಿ ಹಲವು ಸಿರಿಯಲ್‌ನಲ್ಲಿ ನಟಿಸಿರುವ ಚೆರಿಕಾ, ಸದ್ಯ ಲಕ್ಷ್ಮೀ ನಿವಾಸ ಸಿರಿಯಲ್‌ನ ಚೆಲುವಿ ಪಾತ್ರದಲ್ಲಿ ಕಾಣಿಸಿಕ“ಳ್ಳುತ್ತಿದ್ದಾರೆ. ಸಿರಿಯಲ್‌ನಲ್ಲಿ ಪಾತ್ರ ಪಡೆಯಲು ಚೆರಿಕಾ ಅದೆಷ್ಟು ಪರದಾಡಿದ್ದರು. ಕೋವಿಡ್ ಸಮಯದಲ್ಲಿ ಎಷ್ಟು ಸಮಸ್ಯೆ ಅನುಭವಿಸಿದರು ಎಂದು ಅವರೇ ವಿವರಿಸಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ಈ ವೀಡಿಯೋ ನೋಡಿ..