Health Tips: ಜಿಮ್ ಅಂದ್ರೆ ಏನು..? ನಾವು ಎಷ್ಟು ಸಮಯ ಜಿಮ್ ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ಜಿಮ್ ಟ್ರೇನರ್ ಅಂಜನ್ ವಿವರಿಸಿದ್ದಾರೆ.
ಕೆಲವರು ತಾನು ಸಣ್ಣ ಆಗಬೇಕು ಅಥವಾ ಬಾಡಿ ಬೆಳೆಸಿಕ“ಳ್ಳಬೇಕು ಎನ್ನುವ ಕಾರಣಕ್ಕೆ, ಜಿಮ್‌ನಲ್ಲೇ ಅರ್ಧ ದಿನ ಕಳೆದುಬಿಡ್ತಾರೆ. 2ರಿಂದ 3 ತಾಸು ಕಂಟಿನ್ಯೂ ಜಿಮ್ ಮಾಡ್ತಾರೆ. ಆದರೆ ಇದು ತಪ್ಪು ಅಂತಾರೆ ಅಂಜನ್. ನಾವು ನಮ್ಮ ದೇಹದ ತೂಕವನ್ನು ಬೆವರಿನ ಮೂಲಕ ಇಳಿಸುವ ವಿಧಾನವೇ ಜಿಮ್. ಹಾಗಾಗಿ ಅಗತ್ಯಕ್ಕಿಂತ ಹೆಚ್ಚು ಜಿಮ್ ಮಾಡಬಾರದು. ಇದು ಜೀವಕ್ಕೆ ಹಾನಿಕಾರಕ ಅಂತಾರೆ ಅಂಜನ್.
40 ದಾಟಿದ ಬಳಿಕ ನಮ್ಮ ಮೂಳೆ ಸವೆದು, ನಾವು ವಯಸ್ಸಾದಂತೆ ಕಾಣುತ್ತೇವೆ. ಅದನ್ನು ಕಾಣಿಸದೇ, ಯಂಗ್ ಆಗಿ ಕಾಣಲು ಮಾತ್ರ, ನಾವು ಏನು ಸೇವಿಸುತ್ತೇವೋ, ಅದಕ್ಕೆ ತಕ್ಕ ಹಾಗೆ ವರ್ಕೌಟ್ ಮಾಡಬೇಕು ಅಂತಾರೆ ಅಂಜನ್. ಆದರೆ ನಾವು ಸರಿಯಾಗಿ ಆಹಾರ ಸೇವಿಸದೇ, ಜಿಮ್ ಮಾಡಿದೆವು ಅಂದ್ರೆ, ನಮ್ಮ ದೇಹದಲ್ಲಿ ಅನಾರೋಗ್ಯಕರ ಬೆಳವಣಿಗೆ ಆಗತ್ತೆ ಅಂತಾರೆ ಅಂಜನ್. ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.