Monday, November 17, 2025

Latest Posts

Sandalwood: ಸಿನಿಮಾದಲ್ಲಿ ಅವಕಾಶ ಸಿಕ್ಕಿದಾಗ ಬಿದೀಲಿ ಮಲಗಿದ್ರಾ ಮಸಲ್ ಮಣಿ.? : Mahantesh Hiremath Podcast

- Advertisement -

Sandalwood: ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಮಸಲ್ ಮಣಿ ಪಾತ್ರದಲ್ಲಿ ಮಿಂಚಿದ್ದ ಮಹಾಂತೇಷ್ ಅವರು ಜೀವನದಲ್ಲಿ ಸಾಕಷ್ಟು ಕಷ್ಟದ ದಿನಗಳನ್ನು ಕಂಡವರು. ಆದರೆ ಫ್ರೆಂಚ್ ಬಿರಿಯಾನಿ ಸಿನಿಮಾ ಬಂದ ಬಳಿಕ ಅವರು ಇಲ್ಲಿಯವರೆಗೂ ಫುಲ್ ಬ್ಯುಸಿಯಾಗಿರುವ ನಟ. ಸಿನಿಮಾದಲ್ಲಿ ಅವಕಾಶ ಸಿಕ್ಕಾಗ ಮಹಾಂತೇಷ್ ಬೀದಿಲಿ ಮಲಗುವ ಪರಿಸ್ಥಿತಿ ಬಂದಿತ್ತಾ ಎಂಬ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ ನೋಡಿ.

ಫ್ರೆಂಚ್ ಬಿರಿಯಾನಿ ಸಿನಿಮಾ ಮಾಡುವಾಗ ಮಹಾಂತೇಷ್ ಹಲವು ಪ್ರಯೋಗಗಳನ್ನು ಮಾಡಿರುತ್ತಾರೆ. ಅದೇ ರೀತಿ ಸಮಯ ಸಿಕ್ಕಾಗ ಪ್ರಯಾಣ ಮಾಡುತ್ತಾರಂತೆ. ಹಾಗೆ ಹೈದರಾಬಾದ್ಗೆ ಹೋದಾಗ ಅಲ್ಲಿ ಹೋಟೇಲ್ ನಲ್ಲಿ ರೂಮ್‌ ಬುಕ್ ಮಾಡಿ, ತಮ್ಮ ಸೆಲ್ ಫೋನ್ ಮತ್ತು ಚಾರ್ಜರ್ ತೆಗೆದುಕ“ಂಡು ಹೋಗಿ, ಚಾರ್‌ ಮಿನಾರ್ ಬಳಿ ಬಸ್‌ ಸ್ಟ್ಯಾಂಡ್ ನಲ್ಲಿ ಮಲಗಿದ್ದರಂತೆ.

ಹಾಗ್ಯಾಕೆ ಮಲಗಿದ್ದರಂದ್ರೆ, ಆ ರೀತಿ ಪಾತ್ರ ಮಾಡುವ ಅವಕಾಶ ಸಿಕ್ಕಾಗ, ಅದನ್ನು ಅವರೂ ಅನುಭವಿಸಿರಬೇಕು. ಆಗಲೇ ಆ ಪಾತ್ರಕ್ಕೆ ಬೆಲೆ ಬರೋದು. ಹಾಗಾಗಿ ಆ ರೀತಿ ಅನುಭವ ಪಡೆಯಲು ಬಸ್‌ ಸ್ಟ್ಯಾಂಡ್ ನಲ್ಲಿ ಮಲಗಿದ್ದರಂತೆ ಮಹಾಂತೇಷ್.

ಮಹಾಂತೇಷ್ ಅವರು ಫ್ರೆಂಚ್ ಬಿರಿಯಾನಿ ನಂತರ ಯಾವ ಯಾವ ಸಿನಿಮಾದಲ್ಲಿ ನಟಿಸಿದರು..? ಅವರಿಗೆ ಯಾವ ರೀತಿಯ ತಂಡಗಳು ಸಿಕ್ಕಿತು..? ಹೀಗೆ ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನಕ್ಕಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss