Sandalwood: ನೀನಾದೆ ಸಿರಿಯಲ್ ಖ್ಯಾತಿಯ ನಟಿ ಖುಷಿಯವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಭಾಗಿಯಾಗಿದ್ದು, ಸಹನಟ ದಿಲೀಪ್ ಅವರ ಬಗ್ಗೆ ಮಾತನಾಡಿದ್ದಾರೆ.
ನಾನು ಗಜಿಬಿಜಿ ಕ್ಯಾರೆಕ್ಟರ್ ಆದ್ರೆ, ದಿಲೀಪ್ ತಾಳ್ಮೆ ಇರುವ ವ್ಯಕ್ತಿ. ಎಲ್ಲವನ್ನೂ ಕೂಲ್ ಆಗಿ ಹ್ಯಾಂಡಲ್ ಮಾಡ್ತಾರೆ. ಮುಂಚೆ ಎಲ್ಲಾ ಅವರು ನನ್ನ ಬಳಿ ಬಂದು ಮಾತನಾಡಿಸಲು ಪ್ರಯತ್ನಿಸಿದಾಗ, ನಾನು ಹೆಚ್ಚು ಮಾತನಾಡುತ್ತಿರಲಿಲ್ಲ. ಕೇಳಿದರೆ, ಆರೋಗ್ಯ ಸರಿ ಇಲ್ಲವೆಂದು ಸುಳ್ಳು ಹೇಳುತ್ತಿದ್ದೆ. 1 ದಿನ ಅವರು ಬಂದು, ನೋಡು ನಿನ್ನನ್ನು ಹೇಗೆ ಟಾರ್ಚರ್ ಮಾಡ್ತೀನಿ ಅಂತಾ ಹೇಳಿದ್ರು.
ಅಷ್ಟು ದಿನ ಸುಮ್ಮನಿದ್ದ ಖುಷಿ, ಅಂದು ಮಾತನಾಡಿದ್ರಂತೆ. ಯಾರು ಯಾರಿಗೆ ಟಾರ್ಚರ್ ನೀಡುತ್ತಾರೆ ಅಂತಾ ನೋಡೋಣವೆಂದು ಹೇಳಿದ್ದರಂತೆ. ಅದೇ ರೀತಿ ಆಯ್ತು ಅಂತಾ ದಿಲೀಪ್ ಇವತ್ತಿಗೂ ನೆನಪಿಸಿಕ“ಳ್ಳುತ್ತಾರೆಂದು ಖುಷಿ ಹೇಳಿದ್ದಾರೆ.
ಆವಾಗಿನಿಂದ ನಾನು ಕ್ಲೋಸ್ ಆದ್ವಿ. ಅವರಿಗೇನಾದರೂ ಸಮಸ್ಯೆಯಾದರೆ, ನಾನು ಸಹಾಾಯಕ್ಕೆ ಹೋಗುತ್ತೇನೆ. ನನಗೆ ಸಮಸ್ಯೆಯಾದರೆ, ಅವರು ಸಹಾಯಕ್ಕೆ ಬರುತ್ತಾರೆ. ಫ್ಯಾಮಿಲಿ ಫ್ರೆಂಡ್ಸ್ ರೀತಿ ಆಗಿದ್ದೇವೆ ಅಂತಾರೆ ನಟಿ ಖುಷಿ.
ಇನ್ನು ಖುಷಿ ಮತ್ತು ದಿಲೀಪ್‌ಗೆ ಅಭಿಮಾನಿಗಳ ಬಳಗವೇ ಇದ್ದು, ದಿಲ್ಕುಷ್ ಅಂತಲೇ ಆ ಫ್ಯಾನ್ಸ್ ಹೆಸರುವಾಸಿಯಾಗಿದ್ದಾರೆ. ಅಲ್ಲದೇ, ನಿಮ್ಮಿಬ್ಬರ ಮಧ್ಯೆ ಏನಾದರೂ ಸಿಕ್ರೇಟ್ ಇದ್ರೆ ರಿವೀಲ್ ಮಾಡಿ ಅಂತಾ ಅಭಿಮಾನಿಗಳು ಕೇಳಿದ್ದು, ಅವರ ಪ್ರಶ್ನೆಗೆ ಖುಷಿ ನಗು ನಗುತ್ತಲೇ ಉತ್ತರಿಸಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ಈ ವೀಡಿಯೋ ನೋಡಿ..